ತಾ. 1 ರಂದು ನಡೆದ ಪಂದ್ಯದಲ್ಲಿ ಕೊಂಬಾರನ ರಂಜು ಪರಪ್ಪುಮನೆ ತಂಡದ ಎದುರು ಶತಕ ಬಾರಿಸಿ ಗಮನ ಸೆಳೆದರು. 35 ಎಸೆತಗಳಲ್ಲಿ 13 ಸಿಕ್ಸರ್, 8 ಬೌಂಡರಿಗಳೊಂದಿಗೆ 121 ರನ್ ಗಳಿಸಿ ಔಟಾಗದೇ ಉಳಿದರು. ಇದು ಚೆರಿಯಮನೆ ಕ್ರಿಕೆಟ್ ಹಬ್ಬದ ಚೊಚ್ಚಲ ಶತಕವಾಗಿದೆ. ಇದೇ ದಿನ ಕುಡೆಕಲ್ಲು ಕಾರ್ತಿಕ್ ಸಿರಕಜೆ ಹಾಗೂ ಕಡ್ಲೇರ ತಂಡದ ಎದುರು ಅರ್ಧ ಶತಕಗಳನ್ನು ಗಳಿಸುವ ಮೂಲಕ ಒಂದೇ ದಿನದಲ್ಲಿ ಡಬಲ್ ಅರ್ಧ ಶತಕ ಬಾರಿಸಿದ ಆಟಗಾರನೆಂಬ ಕೀರ್ತಿಗೆ ಪಾತ್ರರಾದರು.