ಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಅರುವತೊಕ್ಲು ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ಈಗಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು. ಕೆ.ಜಿ.ಬೋಪಯ್ಯನವರು ತಮ್ಮ ಅವಧಿಯಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಸಕ್ರಿಯ ಕಾರ್ಯಕರ್ತರು ಮಾಡಬೇಕು.
ಅರುವತೋಕ್ಲು ಪಂಚಾಯ್ತಿ ವ್ಯಾಪ್ತಿಯ ಸಮಿತಿಯ ಅಧ್ಯಕ್ಷರಾದ ಮನೆಯಪಂಡ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಮಾತನಾಡಿ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಬಡ ಜನತೆಯ ಪರವಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಿದೆ ಪಕ್ಷದಲ್ಲಿರುವ ಒಗ್ಗಟ್ಟು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಅಧ್ಯಕ್ಷರಾದ ಕುಞಂಗಡ ಅರುಣ್ ಭೀಮಯ್ಯ, ಬಿಜೆಪಿಯ ಹಿರಿಯ ಮುಖಂಡರಾದ ಪಟ್ರಪಂಡ ರಘು ನಾಣಯ್ಯ,ಬಾಂಡ್ ಗಣಪತಿ, ಕಾಂತಿ ಸತೀಶ್,ಸುವಿನ್ ಗಣಪತಿ, ಲಾಲಾ ಭೀಮಯ್ಯ, ರಾಜ ಚಂದ್ರಶೇಖರ್, ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ಗಿರಿಶ್ ಗಣಪತಿ, ಸಿ.ಕೆ.ಬೋಪಣ್ಣ, ಬೋಸ್ ದೇವಯ್ಯ, ಚೋಡುಮಾಡ ಶ್ಯಾಂ, ಸ್ಮೀತಾ ಪ್ರಕಾಶ್,ಮುಂತಾದವರು ಉಪಸ್ಥಿತರಿದ್ದರು.