ಸೋಮವಾರಪೇಟೆ, ಮೇ 2: ಮನೆ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಮನೆಯೊಳಗಿದ್ದ ನಗದು ಹಾಗೂ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಸವೇಶ್ವರ ರಸ್ತೆ ನಿವಾಸಿ ನಾರಾಯಣ ಎಂಬವರ ಮನೆಯ ಬೀಗ ಒಡೆದಿರುವ ಕಳ್ಳರು 40 ಸಾವಿರ ರೂ. ನಗದು, 25 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ನಾಲ್ಕು ದಿನದ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ ನಿನ್ನೆ ರಾತ್ರಿ ಮನೆಗೆ ವಾಪಾಸ್ಸಾಗಿ ನೋಡಿದಾಗ ಕಳ್ಳತನ ನಡೆದಿರುವದು ಬೆಳಕಿಗೆ ಬಂದಿದೆ. ಪಟ್ಟಣದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.