ಕುಶಾಲನಗರ, ಮೇ 2: ಕುಶಾಲನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದರ ಟಯರ್‍ನಲ್ಲಿ ಬೆಂಕಿ ಕಾಣಿಸಿ ಸ್ವಲ್ಪಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಮಡಿಕೇರಿಯಿಂದ ಮೈಸೂರು ಮೂಲಕ ಮದ್ದೂರಿಗೆ ತೆರಳುತ್ತಿದ್ದ ಬಸ್ ಕುಶಾಲನಗರದಲ್ಲಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ತಕ್ಷಣ ಬೆಂಕಿ ಕಂಡ ಸಿಬ್ಬಂದಿಗಳು, ಪ್ರಯಾಣಿಕರು ನೀರು ಸುರಿದು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವದೇ ರೀತಿಯ ಅಪಾಯ ಉಂಟಾಗಿಲ್ಲ. ಪ್ರಯಾಣಿಕರನ್ನು ಬದಲೀ ಬಸ್‍ನಲ್ಲಿ ಕಳುಹಿಸಿಕೊಡಲು ಕ್ರಮಕೈಗೊಳ್ಳಲಾಯಿತು.