ಮಡಿಕೇರಿ, ಮೇ 2: ಇಲ್ಲಿಗೆ ಸನಿಹದ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಮತ್ತು ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಏ. 30 ರಂದು ಸಂಜೆ ಶ್ರೀ ವೆಂಕಟರಮಣ ಸ್ವಾಮಿ ಹರಿಸೇವೆಯೊಂದಿಗೆ ಉತ್ಸವ ಪ್ರಾರಂಭಗೊಂಡು, ತಾ. 1 ರಂದು ಬೆಳಿಗ್ಗೆ ಧ್ವಜಾರೋಹಣ, ಗಣಪತಿ ಹೋಮ, ದೇವಿಗೆ ಅಭಿಷೇಕ, ಹೂವಿನ ಅಲಂಕಾರ, ತೀರ್ಥ, ಕಳಶ ಪೂಜೆ, ಪ್ರಸಾದ ವಿತರಣೆ ನಂತರ ಮಹಾ ಮಂಗಳಾರತಿ ನೆರವೇರಿತು.
ಇದೇ ಸಂದರ್ಭ ದೇವಿ ರಥೋತ್ಸವ ದೇವಾಲಯದ ಆವರಣದಲ್ಲಿ ನೆರವೇರಿತು. ತುಲಾಭಾರ, ಉರುಳುಸೇವೆ, ಅರ್ಚನೆ ಬಳಿಕ ತಾಯಿಯ ದರ್ಶನ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ದೀಪಾಲಂಕಾರ, ಸಾಂಸ್ಕøತಿಕ ಕಾರ್ಯಕ್ರಮಗಳು, ಪೂಜಾ ಕಾರ್ಯಗಳು ನೆರವೇರಿದವು. ಪ್ರಧಾನ ಅರ್ಚಕ ಶ್ರೀನಿವಾಸ್, ಧರ್ಮದರ್ಶಿ ಹೆಚ್.ಎಸ್. ಗೋವಿಂದಸ್ವಾಮಿ, ದೇವರಾಜ್, ಟ್ರಸ್ಟಿಗಳು ಪಾಲ್ಗೊಂಡಿದ್ದರು.