ಮಡಿಕೇರಿ, ಮೇ. 2 : ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನೊಂದಿಗೆ ಸ್ಪಷ್ಟ ಬಹುಮತದ ಸರಕಾರ ರಚಿಸಲಿದೆ ಎಂದು; ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುರುಳಿಧರರಾವ್ ಭವಿಷ್ಯ ನುಡಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ಪ್ರವಾಸೋದ್ಯಮದೊಂದಿಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅವಶ್ಯಕವೆಂದು ಮಾರ್ನುಡಿದರು.ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯತೆ ಮರೆತು, ಕೋಮುವಾದ, ಮತೀಯವಾದ, ಜಾತಿವಾದದೊಂದಿಗೆ ಲಿಂಗಾಯಿತ, ವೀರಶೈವ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸದಲ್ಲಿ ತೊಡಗಿರು ವದು ಆಶ್ಚರ್ಯ ಉಂಟುಮಾಡಿದೆ ಎಂದು ಟೀಕಿಸಿದರು. ಕಾಂಗ್ರೆಸ್-ಜೆಡಿಎಸ್ ಒಂದೇ : ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ನೊಂದಿಗೆ ಬೆಂಗಳೂರು ಮಹಾನಗರದಲ್ಲಿ ಮೈತ್ರಿಯೊಂದಿಗೆ, ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಿದ ಅವರು, ಕರ್ನಾಟಕದ ಸುರಕ್ಷತೆಗಾಗಿ ಜನತೆ ಬಿಜೆಪಿಗೆ ಮತ ನೀಡುವಂತೆ ಮುರುಳಿಧರರಾವ್ ಕರೆ ನೀಡಿದರು.
ಭಯೋತ್ಪಾದÀನೆ ನಂಟು : ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಸಾಕಷ್ಟು ಸಂಶಯದೊಂದಿಗೆ ಕರಾವಳಿ, ಉತ್ತರ ಕನ್ನಡ ಹಾಗೂ ಬೆಂಗಳೂರಿನಲ್ಲಿ ರಾಷ್ಟ್ರಘಾತುಕ ಶಕ್ತಿಗಳೊಂದಿಗೆ ಭಯೋತ್ಪಾದಕ ಸಂಘಟನೆಗಳ ಸಂಬಂಧ ಹೊಂದಿರುವ ಸಂಶಯ ವ್ಯಕ್ತಪಡಿಸಿದ ಅವರು; ಈ ದಿಕ್ಕಿನಲ್ಲಿ ಸಮಗ್ರ ಕರ್ನಾಟಕ ಸುರಕ್ಷತೆಗಾಗಿ ಬಿಜೆಪಿ ಪಣ ತೊಟ್ಟಿದೆ ಎಂದರು.
ಟಿಪ್ಪು ಜಯಂತಿಗೆ ಆಕ್ರೋಶ : ಕೊಡಗು ಸೇರಿದಂತೆ ಇತರೆಡೆಗÀಳಲ್ಲಿ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತಗೊಂಡರೂ; ಕೋಮುವಾದ ಸೃಷ್ಟಿಸಲು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದಾದರೆಂದು ಟೀಕಿಸಿದ ಅವರು ಕೊಡಗಿನ ಮನೆ-ಮನೆಗಳಲ್ಲಿ ಟಿಪ್ಪು ವಿರುದ್ಧ ಆಕ್ರೋಶ ವ್ಯಕ್ತವಾದರೂ ಸರಕಾರ ನಿರ್ಲಕ್ಷ್ಯ ತಳೆದಿದ್ದಾಗಿ ಬೊಟ್ಟು ಮಾಡಿದರು.
(ಮೊದಲ ಪುಟದಿಂದ)
ಆಲಿಬಾಬಾ ಮತ್ತು ಕಳ್ಳರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಆಲಿಬಾಬಾ ಮತ್ತು ಕಳ್ಳರ ತಂಡದಂತೆ ಎಂದು ಟೀಕಿಸಿದ ಮುರುಳಿಧರರಾವ್, ದೇಶದ ಏಕತೆಗೆ ಶ್ರಮಿಸಿದ ಕಾಂಗ್ರೆಸ್ ನಾಯಕ ಸರ್ದಾರ್ ವಲ್ಲಭಬಾಯ್ ಪಟೇಲ್ರನ್ನು ಮರೆತ ಮುಖ್ಯಮಂತ್ರಿಗೆ ಟಿಪ್ಪು ನೆನಪಾಯಿತು ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಎಲ್ಲಿಯವರು : ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಶಾರನ್ನು ಹೊರಗಿನ ಉತ್ತರದವರು ಎನ್ನುವ ಸಿದ್ದರಾಮಯ್ಯ, ಕರ್ನಾಟಕದ ಜನತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಎಲ್ಲಿಯವರು ಎಂದು ಉತ್ತರಿಸಲಿ ಎಂದು ಸವಾಲು ಎಸೆದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಕಾರ್ಯಕರ್ತರ ಹತ್ಯೆ; ಸಾವಿರಾರು ರೈತರ ಆತ್ಮಹತ್ಯೆ ಬಗ್ಗೆ ಅಸಹನೆ ತೋರಿದ ಸಿದ್ದರಾಮಯ್ಯ ಮಠಮಾನ್ಯಗಳು ದೇವಾಲಯಗಳ ಹಸ್ತ ಕ್ಷೇಪಕ್ಕೆ ಯತ್ನಿಸಿದಾಗ ಟೀಕಿಸಿದ ಅವರು; ಸಮಗ್ರ ಕರ್ನಾಟಕದ ಸರ್ವರ ಹಿತಕ್ಕಾಗಿ ಮತ್ತು ರೈತ ಕಲ್ಯಾಣಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರುವದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕೆಂದ್ರ ಸಚಿವ ಮನ್ಸುಕ್ ಮಾಂಡವ್ಯ, ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ಡಾ|| ಮಹೇಂದ್ರ ಸಿಂಗ್, ರಾಜಸ್ತಾನ ಕ್ರೀಡಾ ಪ್ರಾಧಿಕಾರದ ಮಾಜೀ ಅಧ್ಯಕ್ಷ ಧರ್ಮ ನಾರಾಯಣ ಜೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ, ವಿಭಾಗ ಪ್ರಭಾರಿ ಯತೀಶ್ಕುಮಾರ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್. ಜಿ. ಮೇದಪ್ಪ; ಪದಾಧಿಕಾರಿಗಳಾÀ್ದ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಲೋಕೇಶ, ಅರುಣ್ಕುಮಾರ್, ಮಹೇಶ ಜೈನಿ, ಉಮೇಶ್ ಸುಬ್ರಮಣಿ, ಜಗದೀಶ್ ಮೊದಲಾದವರು ಹಾಜರಿದ್ದರು.