ಮಡಿಕೇರಿ: ಜಾತ್ಯತೀತ ಜನತಾದಳದ ರಾಜ್ಯ ಸಮಿತಿ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿಗಳಾದ ಡಾ.ಮನೋಜ್ ಬೋಪಯ್ಯ ಅವರ ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿ ಬಿ.ಎ.ಜೀವಿಜಯ ಅವರ ಪರ ಬುಧವಾರÀ ಮಲ್ಲಿಕಾರ್ಜುನ ನಗರ, ಭಗವತಿ ನಗರ, ಕನ್ನಂಡಬಾಣೆ ವಿಭಾಗಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಯಿತು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮೆಮನೆ ಪಾಲಾಕ್ಷ, ಮತದಾರರಿಂದ ಜೆಡಿಎಸ್ ಪರ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ದೊರೆಯುತ್ತಿದ್ದು, ಜೀವಿಜಯ ಅವರು ವಿಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷರುಗಳಾದ ವಕೀಲ ಜಿ.ಜಿ.ರಮೇಶ್, ನಡುಮನೆ ತಿರುಮಲಸೋನ, ಕಾರ್ಯದರ್ಶಿ ಯಕ್ಷಿತ್ ಕೊತ್ತೋಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾದವ, ಮೂವನ ಸುರೇಶ್ ಸೇರಿದಂತೆ ಮಹಿಳಾ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.