ಮಡಿಕೇರಿ, ಮೇ 2: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕಪ್ ಕ್ರಿಕೆಟ್ನಲ್ಲಿ 10 ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯದಲ್ಲಿ ಅಪ್ಪುಡ ಹಾಗೂ ಪೊದುವಾಡ ನಡುವಿನ ಪಂದ್ಯದಲ್ಲಿ ಅಪ್ಪುಡ ಜಯಗಳಿಸಿತು. ಕುಂಞಂಡ ಹಾಗೂ ಮಾದೆಯಂಡ ನಡುವಿನ ಪಂದ್ಯದಲ್ಲಿ ಮಾದೆಯಂಡ ಜಯಗಳಿಸಿತು. ಮಡ್ಲಂಡ ಹಾಗೂ ತಾತಮಂಡ ನಡುವಿನ ಪಂದ್ಯದಲ್ಲಿ ಮಡ್ಲಂಡ ಜಯ ಗಳಿಸಿತು. ನುಚ್ಚಿಮಣಿಯಂಡ ಹಾಗೂ ಚೋಡುಮಾಡ ನಡುವಿನ ಪಂದ್ಯದಲ್ಲಿ ನುಚ್ಚಿಮಣಿಯಂಡ ಜಯಗಳಿಸಿತು. ಮಚ್ಚಂಡ ಹಾಗೂ ಚೌರೀರ ನಡುವಿನ ಪಂದ್ಯದಲ್ಲಿ ಚೌರೀರ ಜಯಗಳಿಸಿತು. ಬಾಳೆಯಡ ಹಾಗೂ ಮೊಟ್ನಳ್ಳೀರ ನಡುವಿನ ಪಂದ್ಯದಲ್ಲಿ ಬಾಳೆಯಡ ಜಯಗಳಿಸಿತು. ಕುಪ್ಪಣಮಾಡ ಹಾಗೂ ಪಚ್ಚಾರಂಡ ನಡುವಿನ ಪಂದ್ಯದಲ್ಲಿ ಪಚ್ಚಾರಂಡ ಜಯಗಳಿಸಿತು. ಕುಟ್ಟಂಡ ಮತ್ತು ಕೋಣಿಯಂಡ ನಡುವಿನ ಪಂದ್ಯದಲ್ಲಿ ಕುಟ್ಟಂಡ ಜಯಗಳಿಸಿತು. ಅನ್ನಾರ್ಕಂಡ ಬಾರದ ಕಾರಣ ವಾಕ್ ಓವರ್ನಲ್ಲಿ ನೆಲ್ಲಿರ ಜಯಗಳಿಸಿತು. ಅಣ್ಣಳಮಾಡ (ಪೂಕಳ) ಬಾರದ ಕಾರಣ ವಾಕ್ ಓವರ್ ಮೂಲಕ ಮುಕ್ಕಾಟಿರ (ಬೇತ್ರಿ) ಜಯಗಳಿಸಿತು.