ಕುಶಾಲನಗರ, ಮೇ 3: ಬುದ್ದ ಪೂರ್ಣಿಮ ಅಂಗವಾಗಿ ಜಿಲ್ಲಾ ಬುದ್ದ ಪ್ರತಿಷ್ಠಾನದ ಆಶ್ರಯದಲ್ಲಿ ಮಡಿಕೇರಿ ಪೇಟೆ ಶ್ರೀರಾಮ ಮಂದಿರದಲ್ಲಿ ಬುದ್ದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು. ಜಿಲ್ಲಾ ಬುದ್ದ ಪ್ರತಿಷ್ಠಾನದ ಉಪಾಸಕ ಹೆಚ್.ಪಿ. ಶಿವಕುಮಾರ್ ಮಾಲಾರ್ಪಣೆ ಮಾಡಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋಬಳಿ ಅಧ್ಯಕ್ಷ ಸುರೇಶ್ ಪಾಲ್ಗೊಂಡಿದ್ದರು. ವಿಧಿಶಾ ಬೋದ್ ಪ್ರಾರ್ಥಿಸಿದರು. ದೇವಾಲಯದ ಮುಖ್ಯ ಅರ್ಚಕ ಶ್ರೀಕಾಂತ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.