ಪ್ರಸ್ತುತ ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿದ್ದು, ಅಭ್ಯರ್ಥಿಗಳು ಸೇರಿದಂತೆ ಆಯಾ ಪಕ್ಷಗಳ ಬೆಂಬಲಿಗರು ಮತಯಾಚನೆಗೆ ಮನೆ ಮನೆಗೆ ದೌಡಾಯಿಸುತ್ತಿದ್ದಾರೆ. ಮತದಾರರೂ ಹಸನ್ಮುಖಿಗಳಾಗಿ ಕೆಲವೆಡೆ ‘ಗರಂ’ ಆಗಿ ಬಂದವರೊಂದಿಗೆ ಮಾತನಾಡುತ್ತಿದ್ದರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಈ ನಡುವೆ ಮಡಿಕೇರಿಯ ಅರ್ಚಕರೊಬ್ಬರ ಇಡೀ ವ್ಯವಸ್ಥೆಯ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿ ಇದನ್ನು ಬಹಿರಂಗವಾಗಿ ಪ್ರದರ್ಶಿಸಿದ್ದರು. ಮಡಿಕೇರಿ ಓಂಕಾರೇಶ್ವರ ದೇಗುಲದ ಪ್ರಧಾನ ಅರ್ಚಕ ನಾರಾಯಣ ಭಟ್ ಅವರು “ನಮ್ಮ ಬೇಡಿಕೆಗಳಿಗೆ ಸ್ಪಂದನೆಗಳಿಲ್ಲ. ಎಲ್ಲವೂ ಆಶ್ವಾಸನೆಗಳು ಮಾತ್ರ” ಎಂಬ ಆಕ್ಷೇಪ ಸೇರಿ ಇನ್ನಿತರ ಕೆಲವು ಅಂಶಗಳನ್ನು ನಮೂದಿಸಿ ತಮ್ಮ ಮನೆಯ ಗೇಟಿಗೆ ಫಲಕವೊಂದನ್ನು ನೇತು ಹಾಕಿದ್ದಾರೆ. ಇವರ ಅಸಮಾಧಾನವನ್ನು ಹೋಗಲಾಡಿಸುವವರಾರು ಎಂದು ಕಾದು ನೋಡಬೇಕಿದೆ.