ಸೋಮವಾರಪೇಟೆ, ಮೇ 3: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಜಿಯೋ ನೆಟ್‍ವರ್ಕ್ ಸಂಪರ್ಕಕ್ಕಾಗಿ ತೆಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವದರಿಂದ ವಾಹನ ಸವಾರರೊಂದಿಗೆ ಪಾದಚಾರಿಗಳೂ ಸಹ ತೊಂದರೆ ಅನುಭವಿಸು ವಂತಾಗಿದೆ.ಪಟ್ಟಣದಿಂದ ಕಾಗಡಿಕಟ್ಟೆ ಮಾರ್ಗವಾಗಿ ಗೌಡಳ್ಳಿ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಒಂದು ಬದಿ ಗುಂಡಿ ತೆಗೆದು ಕೇಬಲ್‍ಗಳನ್ನು ಅಳವಡಿಸಿ ಕಾಟಾಚಾರಕ್ಕೆ ಮಣ್ಣು ಮುಚ್ಚಲಾಗಿದೆ. ಕೆಲವೆಡೆ ಗುಂಡಿಗಳನ್ನು ಹಾಗೆಯೇ ಬಿಡಲಾಗಿದ್ದು, ಬಲಿಗಾಗಿ ಕಾಯುತ್ತಿರುವಂತೆ ಗೋಚರಿ¸ Àಲ್ಪಡುತ್ತಿದೆ.ಎದುರು ಬರುವ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಂದರ್ಭ ಅವಘಡಗಳಾಗುವ ಸಂಭವ ಅಧಿಕವಿದ್ದು, ಇದರೊಂದಿಗೆ ಜಾನುವಾರುಗಳೂ ಸಹ ಹೊಂಡದೊಳಗೆ ಬೀಳುವ ಅಪಾಯವಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಹೇಂದ್ರಕುಮಾರ್ ಅವರನ್ನು ಸಂಪರ್ಕಿಸಿದ ಸಂದರ್ಭ, ಈ ಹಿಂದೆಯೂ ಅಸಮರ್ಪಕತೆಯ ಕೆಲಸದ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಶನಿವಾರಸಂತೆ ಹಾಗೂ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವದು. ನಿರ್ಲಕ್ಷ್ಯವಹಿಸಿದರೆ ಕ್ರಮಕ್ಕೆ ಮುಂದಾಗುವದಾಗಿ ತಿಳಿಸಿದ್ದಾರೆ.