ಮಡಿಕೇರಿ, ಮೇ 3: ಯಾವದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಲಕ್ಷ ಮೌಲ್ಯದ ಬುರ್ಖಾವನ್ನು ಚುನಾವಣಾ ತನಿಖಾ ತಂಡ ವಶಪಡಿಸಿಕೊಂಡಿದೆ. ಸಂಪಾಜೆ ಗೇಟ್‍ನಲ್ಲಿ ವಾಹನವೊಂದನ್ನು ತಪಾಸಣೆಗೊಳಿಸಿದಾಗ ಅದರಲ್ಲಿ ಸುಮಾರು 2 ಲಕ್ಷ ಮೌಲ್ಯದ ಬುರ್ಖಾ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಬೆಂಗಳೂರಿನ ಅಸ್‍ಫಕ್ ಎಂಬಾತನ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.