ನಾಪೆÇೀಕ್ಲು, ಮೇ. 3: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹದಿನೆಂಟನೇ ದಿನದ ಪಂದ್ಯಾಟದಲ್ಲಿ ಕೂತಂಡ ತಂಡದ ಪರ ಬೋಪಣ್ಣ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸುವದರ ಮೂಲಕ ಎಲ್ಲರ ಗಮನ ಸೆಳೆದರು.
ಗುರುವಾರ ನಡೆದ ಪಂದ್ಯಾಟದಲ್ಲಿ ಕೊಂಗೇಟಿರ, ಬೊವ್ವೇರಿಯಂಡ, ಬಾಚಿರ, ಅನ್ನಾಡಿಯಂಡ, ಕೂತಂಡ, ಕಂಗಾಂಡ, ಮಾಚಿಮಂಡ, ಬಾಚಿರ, ಅಪ್ಪಚ್ಚಿರ ತಂಡಗಳು ಮುನ್ನಡೆ ಸಾಧಿಸಿವೆ.
ಪಟ್ಟಚೆರುವಂಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಂಗೇಟಿರ ತಂಡವು ಪಟ್ಟಚೆರುವಂಡ ತಂಡವನ್ನು ಟೈ ಬ್ರೇಕರ್‍ನ 5-3 ಗೋಲಿನಿಂದ ಸೋಲಿಸಿತು. ಬೊವ್ವೇರಿಯಂಡ ಮತ್ತು ಕೋದೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಕೋದೇಂಗಡ ತಂಡವನ್ನು 3-0 ಗೋಲಿನ ಅಂತರದಿಂದ ಸೋಲಿಸಿತು. ಬೊವ್ವೇರಿಯಂಡ ತಂಡದ ಪರ ಜೀತನ್ ಕಾಳಪ್ಪ ಎರಡು, ಸಚಿನ್ ಮುತ್ತಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಬಾಚಿರ ಮತ್ತು ಚೇಂದ್ರಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಚಿರ ತಂಡವು ಚೇಂದ್ರಿಮಾಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು.
ಬಾಚಿರ ತಂಡದ ಪರ ಸಚಿನ್ ಪೆÇನ್ನಣ್ಣ ಎರಡು, ಚಂಗಪ್ಪ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಅನ್ನಾಡಿಯಂಡ ಮತ್ತು ನಾಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅನ್ನಾಡಿಯಂಡ ತಂಡವು ನಾಪಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ತಂಡದ ಪರ ಸಜನ್ ಸೋಮಣ್ಣ, ವಿಕಾಸ್ ಉತ್ತಯ್ಯ, ನವೀನ್ ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕೂತಂಡ ಮತ್ತು ಬೊಪ್ಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂತಂಡ ತಂಡವು ಬೊಪ್ಪಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ತಂಡದ ಪರ ಬೋಪಣ್ಣ ಹ್ಯಾಟ್ರಿಕ್ ಮೂರು ಗೋಲು, ಸಜನ್ ದೇವಯ್ಯ ಒಂದು ಗೋಲು ದಾಖಲಿಸಿದರು. ಅಜ್ಜೆಟ್ಟಿರ ಮತ್ತು ಕಂಗಾಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಗಾಂಡ ತಂಡವು ಅಜ್ಜೆಟ್ಟಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕಂಗಾಂಡ ತಂಡದ ಪರ ಅರುಣ್ ಮಂದಣ್ಣ ಎರಡು, ಪುನೀತ್ ಮುತ್ತಪ್ಪ ಒಂದು ಗೋಲು ದಾಖಲಿಸಿದರೆ, ಅಜ್ಜೆಟ್ಟಿರ ತಂಡದ ಪರ ಶಂಭು ಪಳಂಗಪ್ಪ ಒಂದು ಗೋಲು ದಾಖಲಿಸಿದರು.
ಅಲ್ಲಂಡ ಮತ್ತು ಮಾಚಿಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಚಿಮಂಡ ತಂಡವು ಅಲ್ಲಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಮಾಚಿಮಂಡ ತಂಡದ ಪರ ದರ್ಶನ್, ಅಪ್ಪಣ್ಣ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಅಪ್ಪಚ್ಚಿರ ಮತ್ತು ಬೇರೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಚ್ಚಿರ ತಂಡವು ಬೇರೆರ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಅಪ್ಪಚ್ಚಿರ ತಂಡದ ಪರ ಅಶಿತ್ ಅಯ್ಯಪ್ಪ, ದರ್ಶನ್ ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಬೇರೆರ ತಂಡದ ಪರ ಸೂರಜ್ ಒಂದು ಗೋಲು ದಾಖಲಿಸಿದರು.