ಮಡಿಕೇರಿ, ಮೇ 4 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಕಪ್‍ನ ಮುಕ್ತಾಯ ಜಂಬರ ತಾ.5ರಂದು ಸಂಜೆ 4 ಗಂಟೆಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೊಂಬಾರನ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಬೆಂಗಳೂರು ಬೊಮ್ಮಸಂದ್ರ ಪುರಸಭಾ ಸದಸ್ಯೆ ಚೆರಿಯಮನೆ ಯಮುನಾ ರತ್ನಕುಮಾರ್, ಮಡಿಕೇರಿ ತಾಲೂಕು ಎ.ಪಿ.ಎಂ.ಸಿ ಅಧ್ಯಕ್ಷ ಕಾಂಗೀರ ಸತೀಶ್, ದೆಹಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ದೆಹಲಿ ಕರ್ನಾಟಕ ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಬೆಳ್ಯಪ್ಪ, ನವದೆಹಲಿಯ ಸೇವಾ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಚೆರಿಯಮನೆ ನಿರಂಜನ್, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಡಾ. ಕೇಟೋಳಿ ಯತೀಶ್‍ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ. ಪ್ರಭಾಕರ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಚೆರಿಯಮನೆ ಕ್ರಿಕೆಟ್ ಕಪ್ ಕ್ರೀಡಾ ಸಮಿತಿ ಅಧ್ಯಕ್ಷ ಡಾ. ಚೆರಿಯಮನೆ ರಾಮಚಂದ್ರ, ಚೆರಿಯಮನೆ ಕುಟುಂಬದ ಪಟ್ಟೆದಾರರಾದ ಕೆಂಚಪ್ಪ, ಬೆಳ್ಯಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಚೆರಿಯಮನೆ ಕ್ರಿಕೆಟ್ ಉತ್ಸವದ ಕುರಿತಾಗಿ ಹೊರತರಲಾಗುವ ಸ್ಮರಣ ಸಂಚಿಕೆಯನ್ನು ಕೇಕಡ ಚಂದ್ರಮ್ಮ ಅಪ್ಪಯ್ಯ ಬಿಡುಗಡೆಗೊಳಿಸುವರು.

ಸಾಂಸ್ಕøತಿಕ ಸಂಭ್ರಮÀ ಸಂಭ್ರಮ

ಮಧ್ಯಾಹ್ನ 1.30 ಗಂಟೆಗೆ ಅರೆಭಾಷೆ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮವನ್ನು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಉದ್ಘಾಟಿಸುವರು. ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಯುವ ವೇದಿಕೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ ಉಪಸ್ಥಿತರಿರುವರು.

ಸನ್ಮಾನ

ಇದೇ ಸಂದರ್ಭ ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಪ್ರತಿಭೆಗಳನ್ನು ಸನ್ಮಾನಿಸಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಚೆರಿಯಮನೆ ಕುಮುದ ರಾಜಕುಮಾರ್, ಕೋಚನ ರುಚಿ, ಕುಡೆಕಲ್ ಸುರಕ್ಷಾ, ತಡಿಯಪ್ಪನ ಸುಚಿತ, ಬಾರಿಕೆ ಜೀವಿತ, ಸೂರ್ತಲೆ ಬೃಂದಾ, ಶಿಕ್ಷಣ ಕ್ಷೇತ್ರದಲ್ಲಿ ಪೆಮ್ಮಟೆ ಪುಷ್ಟಾಂಜಲಿ ಆನಂದ, ವೈದ್ಯಕೀಯ ಕ್ಷೇತ್ರದಿಂದ ಚೆರಿಯಮನೆ ಡಾ. ಪ್ರಶಾಂತ್ ರಾಮಚಂದ್ರ, ಹಿರಿಯರಾದ ಕೇಕಡ ಚಂದ್ರಮ್ಮ ಅಪ್ಪಯ್ಯ, ಚೆರಿಯಮನೆ ನೀಲಮ್ಮ ಬೆಳ್ಯಪ್ಪ, ಚೆರಿಯಮನೆ ಕೆಂಚಮ್ಮ ತಿಮ್ಮಯ್ಯ, ಸೂದನ ಕಮಲ ರಾಘವಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವದೆಂದು ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.