ಮಡಿಕೇರಿ, ಮೇ 3: ಮೂರ್ನಾಡುವಿನ ದಲಿತ ನಾಗಾಸ್ ಅಕಾಡೆಮಿ ವತಿಯಿಂದ 17ನೇ ವರ್ಷದ ಜಿಲ್ಲಾಮಟ್ಟದ ಜೈಭೀಮ್ ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾಟ ತಾ. 25 ರಿಂದ 27 ರವರೆಗೆ ನಡೆಯಲಿದೆ.
ಪಂದ್ಯಾಟವನ್ನು ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಕೂಟ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ತಂಡ ಹೆಸರು ನೋಂದಾಯಿಸಿಕೊಳ್ಳಲು 94487 00847, 96328 39692 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.