ಮೂರ್ನಾಡು, ಮೇ 3: ಶ್ರೀ ಅಯ್ಯಪ್ಪ ದೇವಾಲಯದ ಗಣಪತಿ, ಸುಬ್ರಮಣ್ಯ ಮತ್ತು ಅಯ್ಯಪ್ಪ ದೇವರ ವಿಗ್ರಹ ಪುನರ್‍ಪ್ರತಿಷ್ಠಾಪನೆ ಅಷ್ಠಬಂಧ ಬ್ರಹ್ಮಕಲಶ ತಾ. 5ರಿಂದ 7ರವರೆಗೆ ನಡೆಯಲಿದೆ.ತಾ. 5ರಂದು ಸಂಜೆ 5.30 ಗಂಟೆಯಿಂದ ತಂತ್ರಿ ಪರಿವಾರದ ಆಗಮನ, ಪಂಚಗವ್ಯ, ನಾಂಧಿ ಪುಣ್ಯಾಹ, ಆಲಯ ಸ್ವೀಕಾರ ಮತ್ತು ದೇವತಾ ಪ್ರಾರ್ಥನೆ, ಆರ್ಚಾಯ ವರಣ, ಅಂಕುರಾರೋಪಣ ಮತ್ತು ಅಲಂಕಾರ ಪೂಜೆ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ತಾ. 6ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ನವಗ್ರಹ ಹೋಮ, ನವಗ್ರಹ ಪೂಜೆ, ಜೀವೋದ್ವಾಸನ, ಶಯ್ಯಾಕಲಶ, ಅಂಕುರ ಪೂಜೆ, ಮಹಾಪೂಜೆ, ಕಲಶ ಸ್ಥಾಪನೆ, ಕಲಾ ಮತ್ತು ತತ್ವ ಆರಾಧನೆ, ವೇದ ಪಾರಾಯಣ, ಚಕ್ರಾಬ್ಬ ಪೂಜೆ ನಡೆಯಲಿದೆ.

ತಾ. 7ರಂದು ಬೆಳಿಗ್ಗೆ 6.30 ಗಂಟೆಯಿಂದ ಗಣಪತಿ ಹೋಮ, ಅಧಿವಾಸ ಹೋಮ, ಗಣಪತಿ, ಸುಬ್ರಮಣ್ಯ, ಅಯ್ಯಪ್ಪ ವಿಗ್ರಹ ಪ್ರತಿಷ್ಠಾಪನೆ, ಅಷ್ಠಬಂಧ ಲೇಪನ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.