ಶನಿವಾರಸಂತೆ, ಮೇ 3: ಮೋಟಾರ್ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿದ್ದು, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕಿತ್ತೂರು ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ನಡೆದಿದೆ.ಬಾಗದಾಳು ಗ್ರಾಮದ ಹರೀಶ್ ಹಾಗೂ ಹಿಪ್ಲಿ ಗ್ರಾಂ ಎಚ್.ಡಿ. ಚರಣ್ ರಾಜ್ ಗಾಯಾಳು ಬೈಕ್ ಸವಾರರು. ಗಾಯಾಳುಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಎಚ್.ಡಿ. ಚರಣ್ ರಾಜ್ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ, ಬೈಕ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.