ಸಿದ್ದಾಪುರ, ಮೇ 3: ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಹಾಗೂ ನಗದು ದೋಚಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ನಲ್ವತ್ತೇಕರೆಯ ನಿವಾಸಿಯಾಗಿರುವ ಕೆ. ಮಹಮ್ಮದ್ ಅವರು ತನ್ನ ಪತ್ನಿಯೊಂದಿಗೆ ಅನಾರೋಗ್ಯದ ಕಾರಣ ಮಂಜೇರಿಗೆ ಚಿಕಿತ್ಸೆಗೆ ತೆರಳಿದ್ದರು.ಈ ಸಂದರ್ಭ ಕಳವು ನಡೆದಿದ್ದು, ಚಿನ್ನಾಭರಣ ಹಾಗೂ ನಗದು ರೂ. 28 ಸಾವಿರ, 10 ವಾಚ್‍ಗಳನ್ನು, ಹೊಸ ಬಟ್ಟೆಗಳನ್ನು ಕಳವು ಮಾಡಲಾಗಿದೆ. ಮಹಮ್ಮದ್ ಅವರ ಪತ್ನಿ ಬಿಫಾತು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಮ್ಮದ್ ಅವರ ಮನೆಗೆ ಮಡಿಕೇರಿಯಿಂದ ಶ್ವಾನದಳವನ್ನು ಕರೆಸಿ ತನಿಖೆ ನಡೆಸಲಾಯಿತು.