ಕೂಡಿಗೆ, ಮೇ 3: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಹಾಡಿಯಲ್ಲಿ ಮಲ್ಲ ಎಂಬವರ ಪುತ್ರ ಶಿವ (22) ಎಂಬಾತ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈತ ಚಿಕೂನ್‍ಗೂನ್ಯ ರೋಗದಿಂದ ಬಳಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಅನಿವಾಸಿ ಕೇಂದ್ರದಲ್ಲಿ ಇದುವರೆಗೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಹಾಡಿಯ ಮುಖಂಡ ಮಲ್ಲಪ್ಪ ತಿಳಿಸಿದ್ದಾರೆ.