ಸುಂಟಿಕೊಪ್ಪ, ಮೇ 3: ಮತ್ತಿಕಾಡು ಗ್ರಾಮದ ಶೃತಿ ಕಳೆದ ತಾ. 21 ರಿಂದ ಕಾಣೆಯಾಗಿ ರುವದಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಾಗಿದೆ. 19ರ ಹರೆಯದ ಶೃತಿ ತಂದೆ ಹಾಗೂ ತಾಯಿ 4 ವರ್ಷದ ಹಿಂದೆ ಮರಣವನ್ನಪ್ಪಿದ್ದು, ಕೇರಳದ ಬಿಜೇಶ್ ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ಕುಶಾಲನಗರದ ಮುತ್ತೂಟ್ ಫೈನಾನ್ಸ್‍ನಲ್ಲಿ ಅಡವಿಟ್ಟಿದ್ದ ಚಿನ್ನದ ಸರವನ್ನು ಬಿಡಿಸಿ ತರುವದಾಗಿ ತೆರಳಿದವಳು ವಾಪಾಸು ಮನೆಗೆ ಬಂದ ನಂತರ ಕಾಣೆಯಾಗಿದ್ದಾಳೆ ಎಂದು ಶೃತಿಯ ಚಿಕ್ಕಪ್ಪ ರಮೇಶ್ ಸುಂಟಿಕೊಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಕೆಯ ಸುಳಿವು ಲಭಿಸಿದರೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ 08276-262333 ಸಂಪರ್ಕಿಸುವಂತೆ ಠಾಣಾಧಿಕಾರಿ ಕೋರಿದ್ದಾರೆ.