ವೀರಾಜಪೇಟೆ: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೆಪ್ಪುಡಿಕೊಲ್ಲಿ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ 2 ದಿನಗಳ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ತಾ. 5 ಮತ್ತು ತಾ. 7 ರಂದು ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಚೆಪ್ಪುಡಿಕೊಲ್ಲಿ, ಬೀರುಗದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭ ಕಿರಣ್ ಕಾಮತ್, ಶಾಸ್ತ್ರೀಯ ನೃತ್ಯ ಕಲಾವಿದೆ, ಬೆಂಗಳೂರು (ನಾಟ್ಯಾಚಾರ್ಯ ಮಿಥುನ್ ಶ್ಯಾಂ, ವೈಷ್ಣವಿ ನಾಟ್ಯ ಶಾಲಾ, ಬೆಂಗಳೂರು ಇವರ ಶಿಷ್ಯೆ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಜನಪದ ನೃತ್ಯ ನಡೆಯಲಿದೆ.
ತಾ. 7 ರಂದು ಹರಿಕಥಾ ಕಾಲಕ್ಷೇಪ ಸಂಜೆ 6.30 ರಿಂದ ನಡೆಯಲಿದೆ. ಪರಿಕಥಾ ಕಲಕ್ಷೇಪ - ಗಿರಿಜಾ ಕಲ್ಯಾಣವನ್ನು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಕೀರ್ತನ ಸರಸ್ವತಿ ಹೆಚ್.ಎ. ವಸಂತಲಕ್ಷ್ಮಿ ಬೇಲೂರು ಇವರ ತಂಡ ನಡೆಸಿಕೊಡಲಿದೆ.
ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಅವಭೃತ ಸ್ನಾನ ಹಾಗೂ ಶ್ರೀ ಪಾಲ್‍ಪಾರ್ ಚಾಮುಂಡಿ, ವಿಷ್ಣುಮೂರ್ತಿ ಮೇಲೇರಿ ಉತ್ಸವ ತಾ. 1 ರಿಂದ 8 ರವರೆಗೆ ಜರುಗಲಿದೆ.
ಮುತ್ತಪ್ಪ ದೇವಾಲಯದಲ್ಲಿ ಪೂಜೋತ್ಸವ
ಸೋಮವಾರಪೇಟೆ: ಸಮೀಪದ ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ಜರುಗಿತು. ದೇವಾಲಯದಲ್ಲಿ ಮುತ್ತಪ್ಪ ದೇವರ ವೆಳ್ಳಾಟಂ, ಕುಟ್ಟಿಚಾತನ್ ವೆಳ್ಳಾಟಂ, ಗುಳಿಗನ ವೆಳ್ಳಾಟಂ ನಂತರ ರಾತ್ರಿ 11 ಗಂಟೆಗೆ ಗುರುಶ್ರೀ ದರ್ಪಣದೊಂದಿಗೆ ಉತ್ಸವ ಮುಕ್ತಾಯಗೊಂಡಿತು.
ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿ ಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಪದಾಧಿಕಾರಿಗಳಾದ ಟಿ.ಆರ್. ವಿಜಯ, ಎಂ.ಎ. ಪ್ರಭಾಕರ್, ರಾಧಾಕೃಷ್ಣ, ಪದ್ಮನಾಭ, ಡಿ.ಎಸ್. ಪೊನ್ನಪ್ಪ, ಭರತ್, ಸತೀಶ್, ವಿನೋದ್, ಚನ್ನಕೇಶವ, ಅಪ್ಪು ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಮಹೇಶ್ ಮಾತನಾಡಿ, ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಸುಮಾರು ರೂ. 40 ಲಕ್ಷ ಅಂದಾಜು ವೆಚ್ಚದಲ್ಲಿ ಹಮ್ಮಿಕೊಂಡಿದ್ದು, ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ್ದೇವೆ. ಈ ಹಿನ್ನೆಲೆ ಭಕ್ತಾದಿಗಳು ಹಾಗೂ ದಾನಿಗಳು ದೇವಾಲಯ ಕಾರ್ಯಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದರು.
ಚಾಮುಂಡಿ ವಾರ್ಷಿಕ ಮಹೋತ್ಸವ
ವೀರಾಜಪೇಟೆ: ಚಾಮುಂಡಿ ದೇವಿಯ ವಾರ್ಷಿಕ ಮಹೋತ್ಸವ ಹಲವು ಧಾರ್ಮಿಕ ಆಚರಣೆಗಳೊಂದಿಗೆ ತಾ. 10 ರಿಂದ 11 ವರೆಗೆ ನಡೆಯಲಿದೆ.
ಪೆರುಂಬಾಡಿ-ಬಾಳುಗೋಡು ಗ್ರಾಮದ ಬನದಲ್ಲಿರುವ ಶ್ರೀ ಅಗ್ನಿ ಚಾಮುಂಡಿಯ ವಾರ್ಷಿಕ ಮಹೋತ್ಸವ ತಾ. 10 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ತಕ್ಕರ ಮನೆಯಿಂದ ಭಂಡಾರ ತರುವದು, 10 ಗಂಟೆಗೆ ಕಲಶ ಪೂಜೆ, 12 ಗಂಟೆಗೆ ಶ್ರೀ ದೇವಿಗೆ ಮಹಾಪೂಜೆ ಸಲ್ಲಿಸಲಾಗುತ್ತದೆ. ದೇವಿಯ ದರ್ಶನ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ದೇವರ ನಾಮ ಹಾಡುವದು, ಕುಟ್ಟಿಚಾತ ಮತ್ತು ಕಾಳಭೈರವ ಹಾಗೂ ಇತರ ದೈವಗಳ ಕೋಲಗಳು ನಡೆಯಲಿದೆ.
ತಾ. 11 ರಂದು ಬೆಳಿಗ್ಗೆ ಮೇಲೇರಿ ಚಾಮುಂಡಿ ತೆರೆ, 12 ಗಂಟೆಗೆ ಗುಳಿಗ ತೆರೆ ಮತ್ತು ಅನ್ನಸಂತರ್ಪಣೆ, 2 ಗಂಟೆಗೆ ಬಸುರಿ ತೆರೆ, ಸಂಜೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದ ಭಕ್ತಜನ ಸಂಘದ ವಾರ್ಷಿಕ ಉತ್ಸವ
ನಾಪೆÇೀಕ್ಲು: ದೇವರ ಕೆಲಸವನ್ನು ಭಕ್ತಿಯಿಂದ ಮಾಡಿದರೆ ಗ್ರಾಮದ ಏಳಿಗೆಯೊಂದಿಗೆ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದು ದಾನಿಗಳಾದ ಮೂವೇರ ಡಾಲಿ ಉತ್ತಪ್ಪ ಅಭಿಪ್ರಾಯಪಟ್ಟರು.
ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದ ಭಕ್ತಜನ ಸಂಘದ ವಾರ್ಷಿಕ ಉತ್ಸವ ಮತ್ತು ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹಿಂದೆ ಈ ವ್ಯಾಪ್ತಿಗಳು ದಟ್ಟ ಅರಣ್ಯದಿಂದ ಕೂಡಿದ್ದವು. ಹಿರಿಯರ ಶ್ರಮದಿಂದ ಇಂದು ಉತ್ತಮ ಕಾಫಿ ತೋಟಗಳು ರೂಪುಗೊಂಡು ಗ್ರಾಮಗಳ ಅಭಿವೃದ್ಧಿಯಾಗಿವೆ. ಮುಂದಿನ ಪೀಳಿಗೆ ಇದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಮತ್ತೋರ್ವ ಅತಿಥಿ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ರೋಶನ್ ಮಾತನಾಡಿ, ಭಕ್ತಿಯೊಂದಿಗೆ ಮನುಷ್ಯನನ್ನು ಪ್ರೀತಿಸುವ ಮನಸ್ಸು ಇರಬೇಕು. ಎಲ್ಲರೂ ಗ್ರಾಮದ, ದೇವರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಯ ತಾನಾಗಿ ಬರುವದಿಲ್ಲ. ನಾವೇ ಸಮಯವನ್ನು ಹೊಂದಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಕ್ತಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್ ಸಂಘದ, ದೇವಳದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಯುವಕರು ಇಂತಹ ಕೆಲಸಗಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೆಲಜಿ ಶ್ರೀ ಇಗ್ಗುತ್ತಪ್ಪನ ಮಹಿಮೆ ಇಂದು ಭಕ್ತರಿಗೆ ಅರಿವಾಗಿದೆ. ಹಿಂದೆ ಒಂದೆರಡು ತುಲಾಭಾರ ಸೇವೆಗಳು ಮಾತ್ರ ನಡೆಯುತ್ತಿತ್ತು. ಆದರೆ ಈ ದಿನ 22 ತುಲಾಭಾರ ಸೇವೆಗಳನ್ನು ಭಕ್ತರು ಸಲ್ಲಿಸಿದ್ದಾರೆ. ಅದರೊಂದಿಗೆ ತಾವು ಬೆಳೆದ ಕಾಫಿ, ಕಾಳುಮೆಣಸಿನಂತಹ ವಸ್ತುಗಳನ್ನು ನೀಡುತ್ತಿದ್ದಾರೆ. ಮುಂದಿನ ಎಲ್ಲಾ ಕಾರ್ಯಗಳಿಗೂ ಗ್ರಾಮಸ್ಥರ, ಭಕ್ತರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ತಕ್ಕಮುಖ್ಯಸ್ಥರಾದ ಬದ್ದಂಜೆಟ್ಟಿರ ನಾಣಯ್ಯ, ನಾಪನೆರವಂಡ ಪೆÇನ್ನಪ್ಪ ಮಾತನಾಡಿದರು. ದೇವಳ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಮಣವಟ್ಟಿರ ಪಾಪು ಚಂಗಪ್ಪ ದೇವಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಭಕ್ತಜನ ಸಂಘದ ಖಜಾಂಚಿ ಬದ್ದಂಜೆಟ್ಟಿರ ಜುಮ್ಸ ತಿಮ್ಮಯ್ಯ ಕಳೆದ ಮಹಾಸಭೆಯ ವರದಿ ವಾಚಿಸಿದರು. ವೇದಿಕೆಯಲ್ಲಿ ಭಕ್ತಜನ ಸಂಘದ ಕಾರ್ಯದರ್ಶಿ ಮಾಳೆಯಂಡ ಜಗದಾ ಈರಪ್ಪ ಮತ್ತು ನಿರ್ದೇಶಕರು, ತಕ್ಕಮುಖ್ಯಸ್ಥರಾದ ಬಾಳೆಯಡ ಕುಂಞಪ್ಪ, ಕೈಯಂದಿರ ಅಯ್ಯಪ್ಪ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಂದಾ ನಂಜಪ್ಪ, ಸದಸ್ಯರು ಇದ್ದರು. ಚೀಯಕಪೂವಂಡ ಶ್ರೇಯ ಮತ್ತು ಯಶಿಕಾ ಪ್ರಾರ್ಥನೆ, ಮುಕ್ಕಾಟಿರ ವಿನಯ್ ಸ್ವಾಗತಿಸಿ, ಮಣವಟ್ಟಿರ ಪಾಪು ಚಂಗಪ್ಪ ವಂದಿಸಿದರು. ಮಣವಟ್ಟಿರ ಸುಬ್ರಮಣಿ ಮತ್ತು ತಷ್ಮಾ ಕಾವೇರಿ ನೆರೆದಿದ್ದ ಭಕ್ತರಿಗೆ ಅನ್ನದಾನ ವ್ಯವಸ್ಥೆ ಏರ್ಪಡಿಸಿದ್ದರು.
ಮಾರಿಯಮ್ಮ ಕರಗ
ವೀರಾಜಪೇಟೆ: ವೀರಾಜ ಪೇಟೆಯ ತೆಲುಗರ ಬೀದಿಯಲ್ಲಿರುವ ಮಾರಿ ಯಮ್ಮ ಹಾಗೂ ಅಂಗಾಳ ಪರಮೇಶ್ವರಿ ದಕ್ಷಿಣ ಮಾರಿಯಮ್ಮ ದೇವಿಯ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಪವಿತ್ರ ಗೌರಿಕೆರೆಯಿಂದ ಆರಂಭಗೊಂಡ ಕರಗ ಉತ್ಸವದ ಮೆರವಣಿಗೆ ರಾತ್ರಿ 11 ಗಂಟೆಗೆ ಮಾರಿಯಮ್ಮ ದೇವಾಲಯ ತಲಪಿ ದೇವಾಲಯದಲ್ಲಿ ಸಾಂಪ್ರ ದಾಯಿಕ ವಿಧಿವಿಧಾನಗಳೊಂದಿಗೆ ಮಧ್ಯರಾತ್ರಿ 12.15 ಗಂಟೆಗೆ ಮಹಾಪೂಜಾ ಸೇವೆ ನಡೆಯಿತು. ಕರಗ ಮಹೋತ್ಸವದ ಅಂಗವಾಗಿ ತಾ. 2 ರಂದು ರಾತ್ರಿ 8 ರಿಂದ 10 ರವರಗೆ ನಂದಾ ದೀಪಾರತಿ ನಡೆಯಿತು. ತಾ. 3 ರಂದು ದೇವಿಯ ಮಹಾಪೂಜೆ, ತಾ. 4 ರಂದು ರಾತ್ರಿ 7 ಗಂಟೆಗೆ ವಿಶೇಷ ಅಲಂಕಾರ ಪೂಜೆ, ಮಹಾ ಪೂಜಾ ಸೇವೆ ನಂತರ ರಾತ್ರಿ 8 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಕರಗ ಮಹೋತ್ಸವ ತಾ. 5 ರವರೆಗೆ ನಡೆಯಲಿದ್ದು, ಶನಿವಾರ ಕರಗ ವಿಸರ್ಜನಾರಾಧನೆಯೊಂದಿಗೆ ಉತ್ಸವ ಅಂತಿಮಗೊಳ್ಳಲಿದೆ.