ಗೋಣಿಕೊಪ್ಪ ವರದಿ, ಮೇ 4: ತಾ. 1 ರಂದು ಸಂಜೆ ಸುರಿದ ಗಾಳಿ, ಮಳೆಗೆ ಜೀಪ್ ಮೇಲೆ ಮರದ ರೆಂಬೆ ಬಿದ್ದು ಆರ್.ಆರ್.ಟಿ. ತಂಡದ ಸಿಬ್ಬಂದಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದಾರೆ.

ಕಲ್ತೋಡುವಿನಲ್ಲಿ ಕಾಡಾನೆ ಕಾರ್ಯಾಚರಣೆ ನಡೆಸಿ, ತಿತಿಮತಿ ಕಚೇರಿಗೆ ತೆರಳುತ್ತಿದ್ದಾಗ ತಿತಿಮತಿ ಸರ್ಕಾರಿ ಶಾಲೆಯ ಎದುರು ಇರುವ ಮರದ ದೊಡ್ಡ ರೆಂಬೆ ಜೀಪ್ ಮೇಲೆ ಬಿದ್ದಿದೆ. ಇದರಿಂದ ಜೀಪ್ ಒಳಗಿದ್ದವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಜೀಪ್ ಜಖಂ ಆಗಿದೆ. ಜೀಪ್‍ನಲ್ಲಿ ತಿತಿಮತಿ ಆರ್.ಆರ್.ಟಿ. ತಂಡದ ಸಂಜು, ಸಂತೋಷ, ಸುರೇಶ್, ಮುತ್ತುಮಣಿ, ದಿನೇಶ್, ವಿನಯ್ ಇದ್ದರು.