ಸುಂಟಿಕೊಪ್ಪ, ಮೇ 5: ಸ್ತ್ರೀಯರು ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಭಾಗಿಯಾಗುತ್ತಿರುವದರಿಂದ ದೇಶದ ಅಭಿವೃದ್ಧಿ ಕೊಡುಗೆ ನೀಡುತ್ತಿದ್ದಾರೆ ಎಂದು ಸಂತ ಅಂತೋಣಿ ದೇವಾಲಯದ ಧರ್ಮಗುರು ಎಡ್ವರ್ಡ್ ವಿಲಿಯಂ ಸಾಲ್ಡಾನ ಹೇಳಿದರು.
ಇಲ್ಲಿನ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಓಡಿಪಿ ಸಂಸ್ಥೆ ಮೈಸೂರು ನಬಾರ್ಡ್ ಪೈನಾನ್ಸಿಯಲ್ ಸರ್ವೀಸ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಸಾಕ್ಷರತೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸ್ವಾಲಂಬಿ ಜೀವನದಿಂದ ಆರ್ಥಿಕ ಸದೃಢತೆಯಿಂದ ಕುಟುಂಬ ಉನ್ನತಿ ಕಾಣಲಿದೆ ಹಾಗೆಯೇ ದೇಶದ ಅಭಿವೃದ್ಧಿ ಆಗಲಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮಹಾಪ್ರಬಂಧಕ ಮುಡಂಡ ನಾಣಯ್ಯ ಮಾತನಾಡಿ, ಜನಸಾಮಾನ್ಯರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಅದಂತೆ ಸ್ವಸಹಾಯ ಸಂಘ ಸ್ತ್ರೀಶಕ್ತಿ ಸಂಘಗಳಿಂದ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅರ್ಥಿಕವಾಗಿ ಸಬಲರಾಗಿದ್ದಾರೆ ಶಿಶು, ಕಿಶೋರಿ, ತರುಣ್ ಯೋಜನೆ, ವಿಮಾ ಯೋಜನೆ, ಪ್ರದಾನ ಮಂತ್ರಿ ಜೀವನ ಬೀಮ್ ಯೋಜನೆಯಿಂದ ಜನರಿಗೆ ಪ್ರಯೋಜನವಾಗಿದೆ ಎಂದೂ ಹೇಳಿದರು
ಅತಿಥಿಗÀಳಾಗಿ ಮಹಿಳಾ ಘಟಕದ ಅದ್ಯಕ್ಷೆ ರಿಟಾ ಡಿಸೋಜ ಓಡಿಪಿ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನೇಜೇಸ್ ಕಾರ್ಯದರ್ಶಿ ರೀಟಾ ಲೋಬೋ, ಸಂಚಾಲಕಿ ಗ್ರೇಸಿ ಡೆವಿಡ್ ಭಾಗವಹಿಸಿ ಮಾತನಾಡಿದರು. ರೀನಾ ಸ್ವಾಗತಿಸಿ, ಡೆಲ್ಫಿನ್ ಪೆರ್ನಾಡಿಸ್ ವಂದಿಸಿದರು.