ಶ್ರೀಮಂಗಲ, ಮೇ 5: ದಕ್ಷಿಣ ಕೊಡಗಿನ ಕುಟ್ಟ, ಕೆ. ಬಾಡಗ, ಶ್ರೀಮಂಗಲ, ಕಾನೂರು, ಬಾಳಲೆ, ಟಿ. ಶೆಟ್ಟಿಗೇರಿ, ಬಿರುನಾಣಿ, ಬಾಡಗರಕೇರಿ, ನಾಲ್ಕೇರಿ, ಹುದಿಕೇರಿ, ಬೇಗೂರು, ಪೆÇನ್ನಂಪೇಟೆ ಭಾಗದ ಜೆ.ಡಿ.ಎಸ್. ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಸಂಕೇತ್ ಪೂವಯ್ಯ ಅಸಮರ್ತವಾಗಿ ವರ್ತಿಸುತ್ತಿರುವದಾಗಿ ಅವರ ವಿರುದ್ಧ ರಾಜ್ಯಾಧ್ಯಕ್ಷರಿಗೆ ಪುಕಾರು ನೀಡಲು ನಿರ್ಧರಿಸಲಾಗಿದೆ ಎಂದು ಕೆಲವು ಕಾರ್ಯಕರ್ತರು ಹೇಳಿದ್ದಾರೆ.
ಪೆÇನ್ನಂಪೇಟೆಯಲ್ಲಿ ಸಭೆ ನಡೆಸಿ ಇವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು. ಸಂಕೇತ್ ಪೂವಯ್ಯ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ಮೇಲೆ ಇದುವರೆಗೆ ಯಾವದೇ ಜಿಲ್ಲ್ಲಾ ಸಭೆ ನಡೆಸಿರುವದಿಲ್ಲ ಮತ್ತು ನೈಜ ಹಿರಿಯ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವದಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಬೆಳ್ಳಿಗೆ ಈ ಭಾಗದ ಹಲವಾರು ಕಾರ್ಯಕರ್ತರು ಸಂಕೇತ್ ಪೂವಯ್ಯ ಅವರನ್ನು ಭೇಟಿ ಮಾಡಿ ಚುನಾವಣಾ ಸಿದ್ಧತೆ ಬಗ್ಗೆ ಮಾತನಾಡುವಾಗ ‘ಇಷ್ಟವಿರುವವರು ನನಗೆ ಮತ ಹಾಕಿದರೆ ಸಾಕು. ನನಗೆ ಮಾತನಾಡಲು ಸಮಯವಿಲ್ಲ’ ಎನ್ನುವ ಉತ್ತರ ಆಘಾತವನ್ನುಂಟು ಮಾಡಿದೆ ಎಂದು ಟಿ. ಶೆಟ್ಟಿಗೇರಿ ಸದಸ್ಯ ಸಮಿತಿ ಅಧ್ಯಕ್ಷ ಯು.ಟಿ. ದತ್ತ ಆರೋಪಿಸಿದರು
ಸಭೆಯಲ್ಲಿ ಕುಮುಟೂರು ಗ್ರಾಮದ ಪಕ್ಷದ ಮುಖಂಡರಾದ ಕೊಟ್ರಂಗಡ ಅರುಣ, ಕೆ. ಬಾಡಗದ ಮಲಚೀರ ಅಪ್ಪಣ್ಣ, ಬಿರುನಾಣಿಯ ಚೋನಿರ ಸಜನ್, ಕುಟ್ಟದ ಕರಣ್, ಹುದಿಕೇರಿಯ ಬಾಚೀರ ಸೋಮಣ್ಣ, ಬಿರುನಾಣಿಯ ಕರ್ತಮಾಡ ನರೇಂದ್ರ ಮುತಾಂದವರು ಉಪಸ್ಥಿತರಿದ್ದರು.