ಕುಶಾಲನಗರ, ಮೇ 5: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗ್ರಾ.ಪಂ. ಮಾಜಿ ಉಪಾಧ್ಯಕ್ಷರನ್ನು ತಡೆದು ಬಲವಂತವಾಗಿ ಜೆ.ಡಿ.ಎಸ್. ಪಕ್ಷದ ಶಲ್ಯ ತೊಡಿಸಿ ಫೋಟೋ ತೆಗೆಸಿಕೊಂಡು ಅಪಪ್ರಚಾರ ಮಾಡುತ್ತಿರುವ ಪ್ರಕರಣ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ಆರೋಪ ಕೇಳಿಬಂದಿದೆ.
ಬಿ.ಜೆ.ಪಿ. ತೊರೆದು ಜೆ.ಡಿ.ಎಸ್. ಸೇರ್ಪಡೆಗೊಂಡಿರುವ ಬಗ್ಗೆ ಜೆ.ಡಿ.ಎಸ್. ಕಾರ್ಯಕರ್ತರು ತನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮುಖಂಡ, ಮುಳ್ಳುಸೋಗೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ. ಚೆಲುವರಾಜು ಎಂಬವರು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಜಿಲ್ಲಾ ಸಮಿತಿ ಸದಸ್ಯ ವೈಶಾಖ್, ಬಿಜೆಪಿ ಮುಳ್ಳುಸೋಗೆ ಸ್ಥಾನೀಯ ಸಮಿತಿ ಅಧ್ಯಕ್ಷ ತಮ್ಮಯ್ಯ ಇದ್ದರು.