ಶನಿವಾರಸಂತೆ, ಮೇ 5: ಈ ಬಾರಿಯ ಚುನಾವಣೆಯಲ್ಲಿ 2 ರಾಷ್ಟ್ರೀಯ ಪಕ್ಷಗಳ ಜತೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತೀವ್ರ ಪೈಪೋಟಿ ನೀಡುತ್ತದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಎ. ಜಗನ್ನಾಥ್ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಜೆಡಿಎಸ್ ಮತಪ್ರಚಾರ ನಡೆಸಿ, ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ರೈತರ ಬದುಕಿಗೆ ಅರ್ಥ ಕೊಟ್ಟು ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವದು ಜೆಡಿಎಸ್‍ನ ಮೂಲ ಉದ್ದೇಶವಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಜೆಡಿಎಸ್ ಮಡಿಕೇರಿ ಕ್ಷೇತ್ರ ಉಪಾಧ್ಯಕ್ಷ ಎಂ.ಪಿ. ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಜೆ. ಪ್ರಸನ್ನ, ಪ್ರಮುಖರಾದ ಜಾನಕಿ ರಾಮಯ್ಯ, ಎನ್.ಎನ್. ಯೋಗಾನಂದ್ ನಾರೂರ್, ಎನ್.ಕೆ. ಕೃಷ್ಣಮೂರ್ತಿ, ಎಂ.ಪಿ. ಷಣ್ಮುಖಪ್ಪ, ದರ್ಶನ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.