ಮಡಿಕೇರಿ, ಮೇ 5: ಕೊಡಗು ಜಿಲ್ಲೆಯಾದ್ಯಂತ ದಿನಗಳು ಸಮೀಪಿಸುತ್ತಿದ್ದಂತೆಯೇ ಚುನಾವಣಾ ಪ್ರಚಾರ ಕಾವು ರಂಗೇರತೊಡಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಬಿರುಸಿನ ಪ್ರಚಾರದೊಂದಿಗೆ ಮತ ಬೇಟೆಯೂ ಚುರುಕುಗೊಂಡಿದೆ. ಮುಂದಿನ ಏಳು ದಿನಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ, ಚುನಾವಣಾ ಕಣದಲ್ಲಿರುವ ಹದಿನೇಳು ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.ಸುಂಟಿಕೊಪ್ಪ: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ನಾಕೂರು ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಕಮಲದ ಗುರುತಿಗೆ ಮತ ನೀಡುವಂತೆ ಮತಯಾಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣದ ಚಿಂತನೆ ಜನಪರ ಯೋಜನೆಯಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಲಿದ್ದು, ಶಾಸಕ ಅಪ್ಪಚ್ಚು ರಂಜನ್ ಗೆದ್ದು ಮಂತ್ರಿಯಾಗಲಿದ್ದಾರೆ. ಬಿಜೆಪಿ ಆಡಳಿತದಲ್ಲಿ ಕುಡಿಯುವ ನೀರು, ವಸತಿ ಯೋಜನೆ, ಜನನಿ ಸುರಕ್ಷಾ ಯೋಜನೆ, ರಸ್ತೆ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ ಮತದಾರರಿಗೆ ಮನವರಿಕೆ ಮಾಡಿ ಕೊಟ್ಟರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಮಣಿ, ನಾಕೂರು-ಶಿರಂಗಾಲ ಗ್ರಾಮದ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚೋಮಣಿ (ರಘು), ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೋಹನ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬೆಕಲ್ ಚಂದ್ರಶೇಖರ್, ಸತೀಶ ಮೊಳೂರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಶನಿವಾರಸಂತೆ: 1980 ರಲ್ಲಿ ಉದಯವಾದ ಜಾತ್ಯತೀತ ಜನತಾದಳ ಎಂದರೆ ಜಾತಿ ಮತಕ್ಕೂ ಮೀರಿದ ಪ್ರಾಮಾಣಿಕ ಹಾಗೂ ಸಮಾನತೆಯ ಪಕ್ಷ ಎಂದು ಮಡಿಕೇರಿ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟರು.
ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ - ಕೈಸರವಳ್ಳಿ ಜೆ.ಡಿ.ಎಸ್. ಬೂತ್ ಸಮಿತಿ ಕಾರ್ಯಕರ್ತರ ಮತ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜ್ ಮಾತನಾಡಿ, ರಾಜ್ಯದಲ್ಲಿ ಬದಲಾವಣೆಯ ಗಾಳಿ ಬಲವಾಗಿ ಬೀಸುತ್ತಿದೆ. ಮತದಾರರು ಚಿಂತನೆ ನಡೆಸಿದ್ದಾರೆ. ಹಳ್ಳಿ ಹಳ್ಳಿಯ ಮನೆ ಮನೆಗೂ ತೆರಳಿ ಮತ ಯಾಚಿಸುತ್ತಿದ್ದು, ರೈತರು ಹಾಗೂ ಶ್ರಮಿಕ ವರ್ಗ ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು.
ಹೋಬಳಿ ಅಧ್ಯಕ್ಷ ಎಂ.ಎ. ಆದಿಲ್ ಪಾಶ ಮಾತನಾಡಿ, ಪ್ರಚಾರ ಸಂದರ್ಭ ಎಲ್ಲೆಡೆ ಮತದಾರರಿಂದ ಜೆ.ಡಿ.ಎಸ್.ಗೆ ವರದಾನವಾಗಲಿದೆ ಎಂದರು. ಈ ಸಂದರ್ಭ ಹಲವರು ಬಿ.ಜೆ.ಪಿ., ಕಾಂಗ್ರೆಸ್ ಪಕ್ಷ ತೊರೆದು ಜೆ.ಡಿ.ಎಸ್.ಗೆ ಸೇರ್ಪಡೆಯಾದರು.
ಕೈಸರವಳ್ಳಿ ಗಣೇಶ್ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹೆಚ್.ಬಿ. ಜಯಮ್ಮ, ಲಲಿತಾ, ಕುಸುಮಾ, ಮಂಜುನಾಥ್, ರಾಜಪ್ಪ, ಕೆ.ಕೆ. ಗಣೇಶ್, ಸುಬ್ರಮಣಿ, ತಮ್ಮಯ್ಯಶೆಟ್ಟಿ, ಹೊನ್ನರಾಜಪ್ಪ, ಅಶೋಕ, ಮತ್ತೂರ್ ಮಹೇಶ್, ಪ್ರಸನ್ನ, ಎನ್.ಬಿ. ನಾಗಪ್ಪ, ಹೆಚ್.ಬಿ. ಶೇಷಾದ್ರಿ, ಡಿ.ಪಿ. ಬೋಜಪ್ಪ, ಚೆನ್ನಬಸಪ್ಪ, ಅಪ್ಪಸ್ವಾಮಿ, ಕುಮಾರಸ್ವಾಮಿ, ಸಂತೋಷ್, ಶಿವಣ್ಣ, ಗೋಪಾಲಕೃಷ್ಣ, ಚಂದ್ರ, ವಸಂತ್, ನಂಜಪ್ಪ, ನಾಗೇಶ್, ಅಶ್ವಥ್ ಮತ್ತಿತರರು ಉಪಸ್ಥಿತರಿದ್ದರು.
*ಗೋಣಿಕೊಪ್ಪಲು: ಕಾಂಗ್ರೆಸ್ ವತಿಯಿಂದ ಪಟ್ಟಣದ ಬೀದಿಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಮತಯಾಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹಾಗೂ ಅಂಗಡಿ ಮಳಿಗೆಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಗೆಲುವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡುವ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭ ಗೋಣಿಕೊಪ್ಪಲು ಗ್ರಾಮ ಸದಸ್ಯರುಗಳಾದ ಮುರುಗ, ಮಂಜುಳಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಹಾಗೂ ಕಾರ್ಯಕರ್ತ ಸಮ್ಮದ್ ಸೇರಿದಂತೆ ಹಲವರು ಹಾಜರಿದ್ದರು.ಚಪ್ಪಲಿ ಹಾರದ ಸ್ವಾಗತ...!
ಸೋಮವಾರಪೇಟೆ: ವಿಧಾನಸಭಾ ಚುನಾವಣಾ ಮತ ಭಿಕ್ಷೆಗೆ ಆಗಮಿಸುವ ಮಂದಿಗೆ ಮುಖಕ್ಕೆ ಹೊಡೆಯುವಂತಹ ಸನ್ನಿವೇಶ ನಿರ್ಮಿಸಿದ್ದಾರೆ.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಳಗುಂದ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಮಹಮ್ಮದ್ ತಮ್ಮ ಮುರುಕಲು ಮನೆ ಗೇಟ್ ಬಳಿ ಹಳೆಯ ಚಪ್ಪಲಿ, ಗಂಬೂಟ್‍ಗಳನ್ನು ದಾರದಲ್ಲಿ ಕಟ್ಟಿ, ಸ್ವಾಗತ ಕಮಾನು ಮಾಡಿದ್ದಾರೆ.
1968 ರಿಂದ ಇಲ್ಲಿಯವರೆಗೂ ವಳಗುಂದ ಗ್ರಾಮದಲ್ಲೇ ನೆಲೆಸಿರುವ ತನಗೆ ಅರ್ಜಿ ಸಲ್ಲಿಸಿ ಹಲವು ದಶಕಗಳೇ ಕಳೆದರೂ ಇಂದಿಗೂ ಸವಲತ್ತು ಪಡೆಯಲು ಸಾಧ್ಯವಾಗಿಲ್ಲ. ಗ್ರಾ.ಪಂ., ತಾ.ಪಂ., ಜಿ.ಪಂ., ಎಂಎಲ್‍ಎ, ಎಂ.ಪಿ. ಚುನಾಣೆಯಲ್ಲಿ ಮತ ಭಿಕ್ಷೆಗೆ ಇವರ ಬಳಿ ಆಗಮಿಸುವ ಮುಖಂಡರು ಮಾತಿನಲ್ಲೇ ಮನೆ ಕಟ್ಟಿಕೊಟ್ಟರೇ ಹೊರತು ಇದುವರೆಗೂ ವಾಸ್ತವದ ಮನೆ ನಿರ್ಮಿಸಲು ಸಹಾಯ ಮಾಡಿಲ್ಲ ಎಂದು ಆರೋಪಿಸಿದರು.
ಮೂರ್ನಾಲ್ಕು ದಶಕಗಳ ಹಿಂದೆ ಬಿದಿರಿನ ಕಂಬಗಳು, ಹೆಂಚಿನ ಛಾವಣಿಗಳನ್ನು ಬಳಸಿ ನಿರ್ಮಿಸಿರುವ ಮನೆ ಈಗಲೋ-ಆಗಲೋ ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ನೀರು ಒಳಬರದಂತೆ ತಡೆಯಲು ಪ್ಲಾಸ್ಟಿಕ್ ಟಾರ್ಪಲ್‍ಗಳನ್ನು ಅಳವಡಿಸಲಾಗಿದೆ. ಮನೆ ನಿರ್ಮಿಸಿಕೊಡಿ ಎಂದು ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಅರ್ಜಿಗಳನ್ನು ಹಾಕಿದ್ದಾರೆಯಾದರೂ ಇವರಿಗೆ ಮನೆ ಮಂಜೂರಾಗಿಲ್ಲ.ಗೋಣಿಕೊಪ್ಪಲು: ಸಿದ್ದರಾಮಯ್ಯ ಸರ್ಕಾರ ರೈತರ ಸಾಲವನ್ನು ರೂ. 50 ಸಾವಿರದವರೆಗೆ ಮನ್ನಾ ಮಾಡುವದಾಗಿ ಘೋಷಣೆ ಮಾಡಿ ಅನುಷ್ಠಾನಗೊಳಿಸಿಲ್ಲ. ಸರ್ಕಾರದ ಧೋರಣೆಯಿಂದಾಗಿ ಡಿಸಿಸಿ ಬ್ಯಾಂಕ್, ಇತ್ಯಾದಿ ಬ್ಯಾಂಕ್ ಮೇಲೆ ರೂ. 8000 ಸಾವಿರ ಕೋಟಿ ಹೊಣೆ ಬಿದ್ದಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಟೀಕಿಸಿದರು.
ಬಲ್ಯಮುಂಡೂರು ಧವಸ ಭಂಡಾರ ಮುಂಭಾಗ ಸಾರ್ವಜನಿಕರನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡಿದ ಅವರು, 2008-10, 13 ರವರೆಗೆ ಬಿಜೆಪಿ ಸರ್ಕಾರ 1850 ಕೋಟಿ ಅನುದಾನವನ್ನು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿರುವದಾಗಿ ಹೇಳಿದರು.
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಪಕ್ಷಕ್ಕೆ ಮತ ಚಲಾಯಿಸಲು ಮನವಿ ಮಾಡಿದರು. ಬಿಜೆಪಿ ಪ್ರಮುಖ ಕೊಡಂದೇರ ಬಾಂಡ್ ಗಣಪತಿ ಮಾತನಾಡಿದರು.
ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಪ್ರಮುಖರಾದ ನೆಲ್ಲೀರ ಚಲನ್, ಲಾಲಾ ಭೀಮಯ್ಯ, ಕಾವೇರಿ ಮಂದಣ್ಣ, ಅಜಿತ್ ಕರುಂಬಯ್ಯ, ಕಾಂತಿ ಸತೀಶ್, ರಾಜಾ ಚಂದ್ರಶೇಖರ್, ಕೇರಳ ಬಿಜೆಪಿ ಕಾರ್ಯದರ್ಶಿ ಸುಧಾಕರ್, ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ಎಪಿಎಂಸಿ ಸದಸ್ಯ ಮಾಚಂಗಡ ಸುಜಾ, ಅಜ್ಜಿಕುಟ್ಟೀರ ಪ್ರವೀಣ್, ವಾಟೇರಿರ ಬೋಪಣ್ಣ, ಮತ್ರಂಡ ಕಬೀರ್, ಬಲ್ಯಮುಂಡೂರು ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಎ.ಕೆ. ಮೊಣ್ಣಪ್ಪ, ಕೊಟ್ಟಂಗಡ ಪ್ರಕಾಶ್, ಮುಂಡುಮಾಡ ಗಣೇಶ್, ಆಶಾ, ಚಂದ್ರ ಮುಂತಾದವರು ಉಪಸ್ಥಿತರಿದ್ದರು. ನಂತರ ಅರುವತ್ತೊಕ್ಕಲು, ಬಿ. ಶೆಟ್ಟಿಗೇರಿ, ಬಿಟ್ಟಂಗಾಲ, ಹಾತೂರು ಹಾಗೂ ಗೋಣಿಕೊಪ್ಪಲಿನಲ್ಲಿ ಬೋಪಯ್ಯ ಪ್ರಚಾರ ಭಾಷಣ ಮಾಡಿದರು.
ಕರಿಕೆ: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳ್ಳುಕೊಚ್ಚಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ, ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದ್ದು, ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಿದ ತೃಪ್ತಿಯಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ನೇರ ಕಾರಣವಾಗಿದ್ದು ಒಬ್ಬ ಮತಾಂದನಾಗಿದ್ದ ಟಿಪ್ಪುವಿನ ಜನ್ಮದಿನ ಆಚರಿಸಿ ಕೊಡಗು ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕೆಡಿಸಿ ಹಿಂದು ಕಾರ್ಯಕರ್ತರ ಹತ್ಯೆ ಮಾಡಲಾಯಿತು ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣ್ಯಿ ಮಾತನಾಡಿ, ಕುಟ್ಟಪ್ಪ, ಪ್ರಶಾಂತ ಪೂಜಾರಿ ಸೇರಿದಂತೆ ರಾಜ್ಯದ ಇಪ್ಪತ್ತೆರಡು ಅಮಾಯಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದು ಸಿದ್ದರಾಮ ಸರಕಾರದ ಸಾಧನೆ ಎಂದರು. ಇದೀಗ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು ಅವರ ಅವನತಿಯ ಮುನ್ಸೂಚನೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್ ವಹಿಸಿದ್ದರು. ಸಭೆಯಲ್ಲಿ ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಕವಿತಾ ಪ್ರಭಾಕರ್, ಡೀನ್ ಬೋಪಣ್ಣ, ಕಾಸರಗೋಡು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮ್ಯಾಥ್ಯೂ, ವೇಣು, ಸೂರ್ಯ ಭಟ್, ಉಷಾ ಕುಮಾರಿ, ಐಸಾಕ್ ಸೇರಿದಂತೆ ಅನೇಕ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಯುವ ಕಾಂಗ್ರೆಸ್‍ಗೆ ಆಯ್ಕೆ
ಮಡಿಕೇರಿ: ಮಡಿಕೇರಿ ಯುವ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಎಸ್. ಜಗದೀಶ್, ಮಹಮ್ಮದ್ ರಹಮ್ಮತುಲ್ಲಾ, ಸಲೀಮ್, ಹೆಚ್.ವಿ. ರವೀಂದ್ರ, ಹೆಚ್.ಎಲ್. ಯೋಗೇಶ್ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎಂ.ಡಿ. ಮುದ್ದಪ್ಪ ತಿಳಿಸಿದ್ದಾರೆ.
ಕಾರ್ಯದರ್ಶಿಯಾಗಿ ಜೆ. ಮೈಕಲ್ ಮಾರ್ಷಲ್, ಜಂಟಿ ಕಾರ್ಯದರ್ಶಿಗಳಾಗಿ ಟಿ.ಎಸ್. ಹರ್ಷಿತ್, ಕೆ.ಎನ್. ದಕ್ಷಿತ್, ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಪಿ.ಜೆ. ನಿರಂಜನ್ ಕ್ಸೇವಿಯರ್, ಇಬ್ರಾಹಿಂ, ಕಾನೂನು ಸಲಹೆಗಾರರಾಗಿ ಜಿ.ಕೆ. ಜಲೇಂದ್ರ, ಹೆಚ್.ಆರ್. ಜಯಚಂದ್ರ, ಸಂಯೋಜಕರಾಗಿ ಎಂ. ಮೊಹಮ್ಮದ್ ಹಯಾತ್, ಜಿಯೋ ಕೆ. ಮ್ಯಾಥ್ಯು, ಸೆಲ್ಟಿನ್ ಇಮ್ಮಾನ್ಯುಯೆಲ್ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಮಧುರಾಜ್, ಎಂ.ಯು. ರಿಯಾಜುóದ್ದೀನ್, ಟಿ.ಜೆ. ಸುನೀಲ್, ಎಂ.ಎಂ. ಅಬ್ದುಲ್ ಅಜೀóಜ್, ಕೆ. ಅಬ್ದುಲ್ ಹಮೀದ್, ಸಹ ಕಾರ್ಯದರ್ಶಿಗಳಾಗಿ ಲೋಹಿತ್, ಮಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುದ್ದಪ್ಪ ಮಾಹಿತಿ ನೀಡಿದ್ದಾರೆ.
ಗ್ರಾ.ಪಂ. ಸದಸ್ಯರಾದಿಯಾಗಿ ಹಲವರು ಬಿ.ಜೆ.ಪಿ.ಗೆ
ಮಡಿಕೇರಿ: ಮರಗೋಡು ಗ್ರಾಮ ಪಂಚಾಯಿತಿಯ ಕಟ್ಟೆಮಾಡು ವಾರ್ಡ್‍ನ ಸದಸ್ಯ ಕಾಂಗ್ರೆಸ್ ಪಕ್ಷದಲ್ಲಿದ್ದ ಕಳ್ಳೀರ ಹರೀಶ್ (ಸುರೇಶ್) ಸೇರಿದಂತೆ ಅವರ ಹಲವಾರು ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ತೊರೆದು ಇದೀಗ ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಡಿ.ಎಸ್. ಮಾದಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಹರೀಶ್ ಬಳಿಕದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಪಂಚಾಯಿತಿ ಸದಸ್ಯರಾಗಿದ್ದರು. ಇದೀಗ ಬಿ.ಜೆ.ಪಿ.ಯ ನರೇಂದ್ರ ಮೋದಿ, ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಅವರ ಜನಪರ ಕೆಲಸದಿಂದ ಪ್ರೇರೇಪಿತರಾಗಿ ಬೆಂಬಲಿಗರೊಂದಿಗೆ ಬಿ.ಜೆ.ಪಿ.ಗೆ ಸೇರ್ಪಡೆಯಾಗಿದ್ದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ರವಿ ಕಾಳಪ್ಪ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು, ಸ್ಥಾನೀಯ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್, ಸಲಹೆಗಾರ ಚೇರಂಡ ನಂದಾ, ಬೆಲ್ಲು ಸೋಮಯ್ಯ, ಪಂಚಾಯಿತಿ ಸದಸ್ಯ ಪ್ರಭುಶೇಖರ್, ಮಾಜಿ ಸದಸ್ಯ ಚೆನ್ನಿಗಯ್ಯ ಮತ್ತಿತರರು ಹಾಜರಿದ್ದರು.
ಗುಡ್ಡೆಹೊಸೂರು: ಮಡಿಕೇರಿ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಅವರ ಪರವಾಗಿ ಗುಡ್ಡೆಹೊಸೂರು ಸುತ್ತಮುತ್ತ ಮತಯಾಚನೆ ಮಾಡಲಾಯಿತು.
ಈ ಸಂದರ್ಭ ಮುಖಂಡರಾದ ಯತೀಶ್, ಬಿ.ಎಸ್. ಚಂದ್ರಶೇಖರ್, ಕಾರ್ಯಕರ್ತರಾದ ಅಣ್ಣಯ್ಯ, ಶುಭಶೇಖರ್, ಶಿವಪ್ಪ, ಹೇಸು ಮುಂತಾದವರು ಭಾಗವಹಿಸಿದ್ದರು.
ಸಿದ್ದಾಪುರ: ಕೇಂದ್ರ ಸರ್ಕಾರದ ಯೋಜನೆಗಳಿಗೆ ಬಣ್ಣ ಹಚ್ಚಿ, ರಾಜ್ಯ ಸರ್ಕಾರದ ಹೆಸರನ್ನು ಮುದ್ರಿಸಿ ಪುಕ್ಕಟೆ ಪ್ರಚಾರಗಿಟ್ಟಿಸುತ್ತಿರುವ ಕಾಂಗ್ರೆಸ್
ಪಕ್ಷದ ಸಿದ್ದರಾಮಯ್ಯ ಸರ್ಕಾರವು ಕೆಲವೇ ದಿನಗಳಲ್ಲಿ ರಾಜ್ಯದಿಂದ ಕಣ್ಮರೆಯಾಗಿ, ಅಭಿವೃದ್ಧಿಯ ಪ್ರತೀಕವಾದ ಬಿ.ಜೆ.ಪಿ. ಸರ್ಕಾರ ರಾಜ್ಯದಲ್ಲಿ ಕಂಗೊಳಿಸಲಿದೆ ಎಂದು ಹಾಲಿ ಶಾಸಕ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದರು.
ನೆಲ್ಲಿಹುದಿಕೇರಿಯಲ್ಲಿ ನಡೆದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಬಿ.ಜೆ.ಪಿ. ಜಿಲ್ಲಾ ವಕ್ತಾರ ಅಭಿಮನ್ಯು ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸದಾ ಹಗರಣಗಳನ್ನು, ಕೊಲೆಗಳನ್ನು ಹಾಗೂ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು, ಕಾಂಗ್ರೆಸ್ ಮುಕ್ತ ಭಾರತ ಯಜ್ಞಕ್ಕೆ ಆಹುತಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಪಕ್ಷದ ಪ್ರಮುಖರಾದ ಪಟ್ಟೆಮನೆ ಶೇಷಪ್ಪ ಮಾತನಾಡಿದರು. ಪ್ರಚಾರ ಸಭೆಯ ಅಧ್ಯಕ್ಷತೆಯನ್ನು ನೆಲ್ಲಿಹುದಿಕೇರಿ ಬಿಜೆಪಿ ಸ್ಥಾನೀಯ ಸಮಿತಿ
ಅಧ್ಯಕ್ಷ ಕೆ.ಟಿ. ಷಾಜಿ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಅಚ್ಚಯ್ಯ, ವಸಂತ ಕುಮಾರ್, ಗ್ರಾ.ಪಂ. ಸದಸ್ಯರಾದ ಶಶಿ, ಬಿಂದು, ಯೋಗೇಶ್ ಇತರರು ಹಾಜರಿದ್ದರು.
ಸೋಮವಾರಪೇಟೆ: ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಟಕ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಯಿತು.
ಇಲ್ಲಿನ ಕಕ್ಕೆಹೊಳೆ ಸಮೀಪದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಜಾಗೃತಿ ಬೀದಿ ನಾಟಕದಲ್ಲಿ ರಾಜು ನೇತೃತ್ವದ ತಂಡದ ಸದಸ್ಯರು ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗುಡ್ಡೆಹೊಸೂರು: ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು
ರಂಜನ್ ಪರ ಗುಡ್ಡೆಹೊಸೂರಿನಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಅಲ್ಲಿನ ಬೊಳ್ಳುರು ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಮನೆ ಮನೆಗೆ ಭೇಟಿ ನೀಡುವ ಕಾರ್ಯ ನಡೆಸಲಾಯಿತು.
ಈ ಸಂದರ್ಭ ದೇವಸ್ಥಾನದ ಸಮೀಪದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮಾವನ ಮನೆ ಗುಡ್ಡೆಮಣಿಕುಮಾರ್ ಅವರ ಮನೆಯಿಂದ ಪ್ರಚಾರ ಪ್ರಾರಂಭಿಸಲಾಯಿತು.
ಈ ಸಂದರ್ಭ ಬಿ.ಜೆ.ಪಿ. ಪ್ರಮುಖರಾದ ಎಂ.ಆರ್. ಉತ್ತಪ್ಪ, ಸಲಿ, ಕುಡೆಕ್ಕಲ್ ನಿತ್ಯ, ಕುಡೆಕ್ಕಲ್ ಬಸಪ್ಪ, ಬಿ.ವಿ. ಮೌರ್ಯ, ಪಂಚಾಯಿತಿ ಸದಸ್ಯೆ ಕವಿತ ರಾಜಪ್ಪ, ಪ್ರೇಮ, ಪ್ರಕಾಶ್ (ಪಶುಪತಿ) ಗಿರೀಶ್, ಬಾಲಕೃಷ್ಣ ನಡುಗಲ್ಲು, ಕೆ.ಕೆ. ಗಣೇಶ್, ಬಿ.ಕೆ. ಮೋಹನ್, ಬಸವನಹಳ್ಳಿ ರಾಜು, ಕೆ.ಆರ್. ಗುರುಪ್ರಸಾದ್ (ಪುಚ್ಚ) ಕೆ.ಡಿ. ಗಿರೀಶ್ ಕಣ್ಣಾ ಆಚಾರಿ ಮತ್ತು ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದು, ರೋಡ್ ಶೋ ನಡೆಸಿದರು.
ಗಡಿಯಲ್ಲಿ ಬಿರುಸಿನ ತಪಾಸಣೆ
ಕರಿಕೆ: ವಿಧಾನಸಭಾ ಚುನಾವಣಾ ಹಿನ್ನೆಲೆ ಗಡಿಭಾಗವಾದ ಕರಿಕೆಯಲ್ಲಿ ತಪಾಸಣೆ ಚುರುಕುಗೊಂಡಿದ್ದು, 24 ಗಂಟೆಗಳ ಕಾಲ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹಣ, ಮದ್ಯ ಸಾಗಟದ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ.
ಕೇಂದ್ರೀಯ ಮೀಸಲು ಪಡೆ ಸಿಆರ್‍ಪಿಎಫ್ ತಂಡವನ್ನು ಭದ್ರತಾ ದೃಷ್ಟಿಯಿಂದ ನೇಮಿಸಿದ್ದು ಕರ್ತವ್ಯ ನಿಮಿತ್ತ ಹಾಜರಿರುವ ಚುನಾವಣಾ ಅಧಿಕಾರಿಗಳೊಂದಿಗೆ ಅಬಕಾರಿ, ಪೊಲೀಸ್, ಅರಣ್ಯ ಸಿಬ್ಬಂದಿಗಳು ಕೂಡ ತೊಡಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಇದುವರೆಗೆ ಯಾವದೇ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮ ಪ್ರಕರಣಗಳು ದಾಖಲಾಗಿಲ್ಲ.
ಬಿ.ಜೆ.ಪಿ.ಗೆ ಸೇರ್ಪಡೆ
ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನ ಬಾಣೆ ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು 25ಕ್ಕೂ ಅಧಿಕ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡರು.
ಕೆಂಚಮ್ಮನ ಬಾಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪುತ್ರ ವಿಕ್ರಂ ಪೂವಯ್ಯ, ಪಕ್ಷದ ತಾಲೂಕು ವಕ್ತಾರ ಕೆ.ಜಿ. ಸುರೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಪಾಪಣ್ಣ, ಗ್ರಾ.ಪಂ.
ಸದಸ್ಯ ಹರೀಶ್, ಪಕ್ಷದ ಪ್ರಮುಖರಾದ ವಸಂತ, ಸುಬ್ಬಯ್ಯ, ದುದ್ದಯ್ಯ, ರಘು, ನಿತ್ಯಾನಂದ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ದಿಡ್ಡಳ್ಳಿಯ ಮುತ್ತಮ್ಮ ಆಯ್ಕೆ
ಕೂಡಿಗೆ: ದಿಡ್ಡಳ್ಳಿ ಆದಿವಾಸಿಗಳ ಸ್ಥಳಾಂತರದ ವಿಷಯವಾಗಿ ಹೋರಾಟ ಮಾಡಿದ ಆದಿವಾಸಿ ಮುಖ್ಯಸ್ಥೆ ಬಿ.ಕೆ. ಮುತ್ತಮ್ಮ ಜಿಲ್ಲಾ ಬಿಜೆಪಿ ಪರಿಶಿಷ್ಟ ಪಂಗಡದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ತಾಲೂಕು ಎಸ್‍ಟಿ ಘಟಕದ ಅಧ್ಯಕ್ಷ ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುತ್ತಮ್ಮ ಅವರನ್ನು ಜಿಲ್ಲಾ ಬಿಜೆಪಿ ಎಸ್‍ಟಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆ ಮಾಡÀಲಾಯಿತು. ಈ ಸಂದರ್ಭ ಮುತ್ತಮ್ಮ ಮಾತನಾಡಿ, ಆದಿವಾಸಿಗಳಿಗೆ ನೆಲೆ ಕಲ್ಪಿಸಿಕೊಡಬೇಕೆಂದು ಮುಂದಿನ ದಿನಗಳಲ್ಲಿ ಆದಿವಾಸಿಗಳ ಪರವಾಗಿ ಹೋರಾಟ ಮಾಡುವದಾಗಿ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಎಸ್‍ಟಿ ಘಟಕದ ಅಧ್ಯಕ್ಷ ಮಿಟ್ಟು ರಂಜಿತ್, ಪ್ರಧಾನ ಕಾರ್ಯದರ್ಶಿ ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕೂಡಿಗೆ ಸ್ಥಾನೀಯ ಸಮಿತಿಯ ಅಧ್ಯಕ್ಷ ಜಗದೀಶ, ಸೀಗೆಹೊಸೂರು ಧನಂಜಯ್, ಕೂಡಿಗೆ ಯುವ ಮೋರ್ಚಾದ ಅಧ್ಯಕ್ಷ ಚಿಣ್ಣಪ್ಪ ಸೇರಿದಂತೆ ಕಾರ್ಯಕರ್ತರು ಇದ್ದರು.
ಕರಿಕೆಯಲ್ಲಿ ಅರುಣ್ ಮಾಚಯ್ಯ ಪ್ರಚಾರ
ಕರಿಕೆ: ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅರುಣ್
ಮಾಚಯ್ಯ ಕರಿಕೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮತ್ತೊಂದು ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವದು ನಿಶ್ಚಿತವಾಗಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಗಾಗಿ ಸರ್ಕಾರವನ್ನು ಮುನ್ನಡೆಸಲಿದ್ದು, ಜನಪರ ಕಾರ್ಯಕ್ರಮಗಳಿಂದ ಜನರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದು ತನ್ನ ಗೆಲುವು ಖಚಿತವೆಂದರು. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷ ಶಿವು ಮಾದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಪ್ರಮುಖರಾದ ಟಿ.ಪಿ. ರಮೇಶ್, ಬೇಕಲ್ ದೇವರಾಜ್, ಸುನೀಲ್ ಪತ್ರಾವೋ, ರಮಾನಾಥ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶಿರಂಗಾಲದಲ್ಲಿ ವಾಹನ ತಪಾಸಣೆ
ಕೂಡಿಗೆ: ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಗಡಿಭಾಗ ಶಿರಂಗಾಲ ಗೇಟ್ ಬಳಿ ವಾಹನಗಳನ್ನು ಕಟ್ಟುನಿಟ್ಟಾ�?