ಮಡಿಕೇರಿ, ಮೇ 5: ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದಏವಾಲಯದಲ್ಲಿ ದೇವಿ ಜಯಂತಿ ತಾ. 8 ರಂದು ಬೆಳಿಗ್ಗೆ 9 ಗಂಟೆಯಿಂದ ನೆರವೇರಲಿದೆ.

ಬೆಳಿಗ್ಗೆ 9 ಗಂಟೆಗೆ ಶ್ರೀ ಕನ್ನಿಕಾ ಪರಮೇಶ್ವರಿ ಹಾಗೂ ಬಸವೇಶ್ವರ ದೇಗುಲಗಳಲ್ಲಿ ಪೂಜೆಯೊಂದಿಗೆ ಮೆರವಣಿಗೆ ಏರ್ಪಡಿಸಿದ್ದು, ವಿವಿಧ ಸೇವೆಗಳೊಂದಿಗೆ ಸನ್ನಿಧಿಯಲ್ಲಿ ಮಧ್ಯಾಹ್ನ 12.30 ರ ಬಳಿಕ ಮಹಾ ಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6 ರಿಂದ 8 ಗಂಟೆ ತನಕ ಭಜನೆ, ದೀಪಾರಾಧನೆ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿದೆ.