ಕೂಡಿಗೆ, ಮೇ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಮುಳ್ಳುಸೋಗೆ ಕಾರ್ಯಕ್ಷೇತ್ರದ ಪ್ರಧಾನ ಜಂಟಿ ಬಾದ್ಯತಾ ಸಂಘದ ಸದಸ್ಯರಿಗೆ ಸ್ವಉದ್ಯೋಗ ಪೂರಕ ಚಟುವಟಿಕೆಗಳಿಗೆ ರೂ 1.25 ಲಕ್ಷ ಪ್ರಗತಿನಿಧಿ ಸಾಲದ ಮಂಜೂರಾತಿ ಪತ್ರವನ್ನು ಕೂಡಿಗೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ವಿತರಿಸಿದರು.

ಪ್ರಧಾನ ಜೆ.ಯಲ್.ಜಿ. ಸಂಘದ ಸದಸ್ಯೆ ಮೀನಾಕ್ಷಿ ರಮೇಶ್ ಅವರಿಗೆ ಫರ್ನಿಚರ್ ಕೆಲಸಕ್ಕೆ ರೂ. 25 ಸಾವಿರ, ಲಕ್ಷೀ ಚಂದ್ರಪ್ಪ ಅವರಿಗೆ ಹಿಟ್ಟಿನ ಗಿರಣಿ ಹಾಗೂ ಹೈನುಗಾರಿಕೆಗೆ ರೂ. 25 ಸಾವಿರ, ಸರಸ್ವತಿ ಗಣೇಶ್ ಅವರಿಗೆ ಫರ್ನಿಚರ್ ಕೆಲಸಕ್ಕೆ ರೂ. 25 ಸಾವಿರ, ನೇತ್ರಾವತಿ ದಿನೇಶ್ ಅವರಿಗೆ ಬಟ್ಟೆ ವ್ಯಾಪಾರಕ್ಕೆ ರೂ. 25 ಸಾವಿರ, ವಿಜಯ ನರಸಿಂಹಾಚಾರಿ ಅವರಿಗೆ ಹೊಟೇಲ್ ಅಭಿವೃದ್ಧಿಗೆ ರೂ. 25 ಸಾವಿರ ಪ್ರಗತಿನಿಧಿ ಸಾಲದ ಮಂಜೂರಾತಿ ಪತ್ರವನ್ನು ವಲಯದ ಮೇಲ್ವಿಚಾರಕರು ವಿತರಿಸಿ ಜಂಟಿ ಬಾದ್ಯತಾ ಸಂಘಕ್ಕೆ ತಾಲೂಕಿನಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಧಾನ ಸಂಘಕ್ಕೆ ಪ್ರಗತಿನಿಧಿ ಸಾಲ ಮಂಜೂರಾಗಿದ್ದು, ಸದಸ್ಯರು ಪ್ರಗತಿನಿಧಿಯನ್ನು ಸದ್ಬಳಕೆ ಮಾಡಿಕೊಂಡು ಇತರ ಸದಸ್ಯರಿಗೆ ಮಾದರಿಯಾಗಿ ಸಂಘದ ನಿರ್ವಹಣೆ ಮಾಡಿ ಇನ್ನೂ ಹೆಚ್ಚಿನ ಸೌಲಭ್ಶಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದುವಂತೆ ಮಾಹಿತಿ ನೀಡಿದರು.

ಈ ಸಂದರ್ಭ ಸೇವಾ ಪ್ರತಿನಿಧಿ ರಾಧಾ ದೇವರಾಜ್ ಮತ್ತಿತರರು ಇದ್ದರು.