ಗೋಣಿಕೊಪ್ಪಲು: ಚುನಾವಣಾ ಆಯೋಗ, ತಾಲೂಕು ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮತದಾನ ಹಕ್ಕು ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು. ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲೂಕು ಮಟ್ಟದ ಜಾಥಾ ಕಾರ್ಯಕ್ರಮದಲ್ಲಿ ತಾಲೂಕಿನ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಲೀಲಾವತಿ ಜಿಲ್ಲಾ ಸಂಯೋಜಕ ಸ್ವಚ್ಛ ಭಾರತ್ ಮಿಷನ್ ಅಜ್ಜಿಕುಟ್ಟೀರ ಸೂರಜ್, ಜಿಲ್ಲಾ ಸಂಯೋಜಕ ಎನ್.ಆರ್.ಎಲ್.ಎಂ. ಮಹೇಶ್, ವೀರಾಜಪೇಟೆ ತಾಲೂಕು ಸಾಮಾಜಿಕ ಪರಿಶೋಧಕ ಸತೀಶ್, ಮತದಾನ ಹಕ್ಕು ಕುರಿತು ಜಾಗೃತಿ ಪ್ರತಿಜ್ಞೆ ಅರಿವು ಮೂಡಿಸಿದರು. ಪೆÇನ್ನಂಪೇಟೆ ಬಸ್ ನಿಲ್ದಾಣದಿಂದ ಕಾಲೇಜಿನವರೆಗೆ ಮೆರವಣಿಗೆ ನಡೆಸಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸಂಯೋಜಕ ನಂದೀಶ್ ಉಪಸ್ಥಿತರಿದ್ದರು.