ಮಡಿಕೇರಿ ಮೇ 6: ಪ್ರಸಕ್ತ (2018-19) ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸ ಲಾಗಿದೆ. ಅರ್ಜಿಯನ್ನು ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ.

ಷರತ್ತುಗಳು: 5ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿರ ಬೇಕು. ಆಯ್ಕೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ ಶ್ರೀ ಸಾಯಿ ಶಂಕರ ಶೈಕ್ಷಣಿಕ ಸಂಸ್ಥೆ ಪ್ರಶಾಂತಿ ನಿಲಯ ಪೊನ್ನಂಪೇಟೆ, ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆ ಮಡಿಕೇರಿ ಇಲ್ಲಿ 6ನೇ ತರಗತಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವದು, ವಿದ್ಯಾರ್ಥಿಗಳಿಂದ ಜಾತಿ ದೃಢೀಕರಣ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಮುಖ್ಯೋಪಾ ಧ್ಯಾಯರಿಂದ ದೃಢೀಕೃತಗೊಂಡ ಅಂಕ ಪಟ್ಟಿ ಸಲ್ಲಿಸುವದು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ರೂ. 2 ಲಕ್ಷ ಒಳಗೆ ಇರಬೇಕು. (ಈ ಬಗ್ಗೆ ತಹಶೀಲ್ದಾರರವರಿಂದ ಪಡೆದ ಆದಾಯ ಪ್ರಮಾಣ ಪತ್ರ ಸಲ್ಲಿಸುವದು). ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ- 08272-229983, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ-08274-261261, ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ- 08272-223552, ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ಇಲ್ಲಿ ಪಡೆಯಬಹುದಾಗಿದೆ.

ಸಹಕಾರ ಡಿಪ್ಲೊಮಾ ತರಬೇತಿಗೆ

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳವು ಮಡಿಕೇರಿ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆ ನಡೆಸುತ್ತಿದ್ದು, ಈ ತರಬೇತಿ ಸಂಸ್ಥೆಯ ಮೂಲಕ ಸಹಕಾರ ಸಂಘ ಸಂಸ್ಥೆ/ ಸಹಕಾರ ಇಲಾಖೆ/ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು ಅವಧಿಯ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್” ತರಬೇತಿಯನ್ನು ಜುಲೈ 2 ರಿಂದ ಪ್ರಾರಂಭಿಸಲಾಗುತ್ತಿದೆ.

ತರಬೇತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸಹಕಾರ ಸಂಘ/ಸಹಕಾರ ಇಲಾಖೆ/ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತ ವಾಗಿ ಅವಕಾಶ ಕಲ್ಪಿಸಲಾಗಿದೆ. ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣ ರಾಗಿ, ಸಹಕಾರ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಇಂತಹ ಅಭ್ಯರ್ಥಿಗಳು ಮಾತ್ರ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400 ಗಳ ಶಿಷ್ಯವೇತನ ನೀಡಲಾಗುವದು.

ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 6 ತಿಂಗಳು ವಿಶೇಷ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯನ್ನು ಸಹ ನೀಡಲಾಗುವದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ತರಿಸಿಕೊಳ್ಳಲಾಗುವದು ಮತ್ತು ಈ ವರ್ಗದ ಅಭ್ಯರ್ಥಿಗಳು ಆಯಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಮೂಲಕ ಅಥವಾ ವ್ಯವಸ್ಥಾಪಕ ನಿರ್ದೇಶಕರು, ಮಡಿಕೇರಿ ಹಾಗೂ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರ ಮೂಲಕ ಅರ್ಜಿಗಳನ್ನು ತಾ. 31 ರೊಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷಗಳು ಮೀರಿರಬಾರದು. ಈ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 500 ಶಿಷ್ಯ ವೇತನವನ್ನು ನೀಡಲಾಗುವದು.

ಪ್ರಸಕ್ತ ತರಬೇತಿ ಅಧಿವೇಶನ ಜುಲೈ 2 ರಿಂದ ಪ್ರಾರಂಭವಾಗಲಿದೆ. ಡಿ.ಸಿ.ಎಂ. ತರಬೇತಿಯ ಅರ್ಜಿ ಫಾರಂ ಮತ್ತು ವಿವರಣಾ ಪುಸ್ತಕವನ್ನು ತರಬೇತಿ ಸಂಸ್ಥೆಯಿಂದ ಪಡೆಯಬಹುದು. ಅರ್ಜಿ ಮತ್ತು ವಿವರಣಾ ಪುಸ್ತಕದ ಶುಲ್ಕ ರೂ. 75 (ರೂ. ಎಪ್ಪತ್ತೈದು ಮಾತ್ರ)ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆಯಲ್ಲಿ ಪಡೆಯಬಹುದು. ಅಂಚೆ ಮೂಲಕ ಪಡೆಯಲು ಇಚ್ಛಿಸುವವರು ರೂ. 125 (ರೂ. ಒಂದು ನೂರ ಇಪ್ಪತ್ತೈದು ಮಾತ್ರ)ಗಳ ಡಿ.ಡಿ. ಮೂಲಕ ಪಾವತಿಸಿ ಪಡೆಯಬಹುದಾಗಿದೆ.

ತರಬೇತಿಗೆ ಅರ್ಜಿ ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಮಡಿಕೇರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-228437/ 9902189872 /9535250704 / 9449245024 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲರು ತಿಳಿಸಿದ್ದಾರೆ.