ಗೋಣಿಕೊಪ್ಪ ವರದಿ, ಮೇ 6: ಕೊಡವ ಎಜುಕೇಶನ್ ಸೊಸೈಟಿ ಮತ್ತು ಟಾಟಾ ಟ್ರಸ್ಟ್ ವತಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ಪವರ್ ಪ್ಲಾಂಟ್‍ನ್ನು ಐಟಿಸಿ ಲಿಮಿಟೆಡ್‍ನ ನಿ. ಹಿರಿಯ ಉಪಾಧ್ಯಕ್ಷ ಕಂಬೇಯಂಡ ಸುನಿಲ್ ಬಿದ್ದಪ್ಪ ಉದ್ಘಾಟಿಸಿದರು.

ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಾರ್ಷಿಕೋತ್ಸವ ಹಾಗೂ ಸೋಲಾರ್ ಪ್ಲಾಂಟ್ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಮುಂಡಂಡ ಪಿ. ನಂದಾ, ರಮ್ಯಾ ಪ್ರಕಾಶ್, ಕೊಡವ ಎಜುಕೇಶನ್ ಸೊಸೈಟಿ ನಿರ್ದೇಶಕ ಕರ್ತಮಾಡ ತಿಮ್ಮಯ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ವಿದ್ಯಾರ್ಥಿಗಳಾದ ಎ. ಜಿ. ಮೇಘನಾ ಹಾಗೂ ನಾಗೇಶ್‍ಗೌಡ ಅವರ ‘ಕಂಗಳ ಮಿಂಚಿನಲಿ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಸಿಐಟಿ ಎರಾ ಹಾಗೂ ಸಿಯಟಿ ಸ್ಕಾಲರ್ಸ್ ಪ್ರೊಫಯಲ್ ಎಂಬ ಸಂಚಿಕೆಯನ್ನು ಅನಾವರಣ ಗೊಳಿಸಲಾಯಿತು. ಈ ಸಂದರ್ಭ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ. ಪಿ. ಬೆಳ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಜಂಟಿ ಕಾರ್ಯದರ್ಶಿ ಚಿರಿಯಪಂಡ ರಾಜಾ ನಂಜಪ್ಪ, ಖಜಾಂಜಿ ಕೆ. ಎನ್ ಉತ್ತಪ್ಪ, ನಿರ್ದೇಶಕರುಗಳಾದ ಡಾ. ಕಾರ್ಯಪ್ಪ, ರವಿ ಉತ್ತಪ್ಪ, ಪ್ರಾಂಶುಪಾಲ ಡಾ. ಪಿ. ಮಹಭಲೇಶ್ವರಪ್ಪ, ವಿದ್ಯಾರ್ಥಿ ಸಂಘದ ಸಲಹೆಗಾರ ಎ. ಜಿ. ತಿಮ್ಮಯ್ಯ, ಉಪಾಧ್ಯಕ್ಷ ಬಿ. ಪಿ. ಕುಶಾಲಪ್ಪ, ಕಾರ್ಯದರ್ಶಿ ಎ. ಎಸ್. ಗಣಪತಿ, ಟಾಟಾ ಸೋಲಾರ್‍ನ ಪ್ರಮುಖರುಗಳಾದ ಪಣಿಚಂದ್ರ ಹಾಗೂ ಮುತ್ತುರಾಜ್ ಉಪಸ್ಥಿತರಿದ್ದರು. ಶಿವಿಕಾ ಹಾಗೂ ಸುಷ್ಮಾ ಪ್ರಾರ್ಥಿಸಿದರು. ಶರಣ್ಯ ಸ್ವಾಗತಿಸಿದರು.