ಶ್ರೀಮಂಗಲ, ಮೇ 6: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 7 ರಂದು (ಇಂದು) ಸಂಜೆ 6.30 ಗಂಟೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಕೀರ್ತನ ಸರಸ್ವತಿ ಹೆಚ್.ಎ ವಸಂತ ಲಕ್ಷ್ಮಿ ಬೇಲೂರು ಇವರ ತಂಡದಿಂದ ಬೀರುಗ ಗ್ರಾಮದ ಚೊಪ್ಪುಡಿಕೊಲ್ಲಿ ಶ್ರೀ ಪಾಲ್ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪಾಲ್ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಧರ್ಮದರ್ಶಿ ಚೆಕ್ಕೇರ ರಾಜಪ್ಪ ಸುಬ್ಬಯ್ಯ ನೆರವೇರಿಸಲಿದ್ದಾರೆ. ಕ.ಸಾ.ಪ ವೀರಾಜಪೇಟೆ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕೊಡವ ಸಮಾಜದ ಪೂರ್ವ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ,ಚೆಕ್ಕೇರ ಕಾಳಯ್ಯ, ಅಜ್ಜಮಾಡ ಲವ ಕುಶಾಲಪ್ಪ, ಮಲ್ಲೇಂಗಡ ಕೀರ್ತಿ, ಪರಿಷತ್ ಕಾರ್ಯದರ್ಶಿಗಳಾದ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಹಾಗೂ ರೇಖಾ ಶ್ರೀಧರ್ ಭಾಗವಹಿಸಲಿದ್ದಾರೆ. ರಾತ್ರಿ 9 ಗಂಟೆಯಿಂದ ತಾ. 8 ರ ಸಂಜೆ 5 ಗಂಟೆಯವರೆಗೆ ಶ್ರೀ ಪಾಲ್ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವರ ವಾರ್ಷಿಕ ಮೇಲೇರಿ ಉತ್ಸವ ಜರುಗಲಿದೆ.