ಶ್ರೀಮಂಗಲ, ಮೇ 6: ಪ್ರಪಂಚದ 200ಕ್ಕೂ ಹೆಚ್ಚು ದೇಶಗಳ ಪೈಕಿ ಅತ್ಯುತ್ತಮ ಸಂಸ್ಕøತಿ ಹಾಗೂ ಧಾರ್ಮಿಕತೆಯ ಮೌಲ್ಯವುಳ್ಳ ದೇಶವೆಂದು ಗುರುತಿಸಿಕೊಂಡಿರುವ ಭಾರತ ದೇಶದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗೆ ಅತ್ಯುನ್ನತ ಸ್ಥಾನವಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ವೀರಾಜಪೇಟೆ ತಾಲೂಕು ಘಟಕ ಹಾಗು ಬೀರುಗ ಗ್ರಾಮದ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಜಂಟಿ ಆಶ್ರಯದಲ್ಲಿ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶವು ಅತ್ಯುತ್ತಮ ಸಂಸ್ಕøತಿ ಹೊಂದಿರುವದ ರಿಂದಲೇ ವಿಶ್ವದಲ್ಲಿ ಅತೀ ಶ್ರೇಷ್ಠವೆಂದು ಗುರುತಿಸಿಕೊಂಡಿದೆ. ಅದರಲ್ಲೂ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಪುರಾತನ ಹಾಗೂ ಅತೀ ಹೆಚ್ಚು ಶಬ್ದಗಳನ್ನು ಹೊಂದಿರುವ ಭಾಷೆ ಎಂದು ಮಾನ್ಯತೆ ಪಡೆದಿದೆ. ಇದರಿಂದಲೇ ಇತರ ಎಲ್ಲಾ ಭಾಷೆಗಳಿಗಿಂತ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯಲು ಸಾದ್ಯವಾಗಿದೆ. ಇಂತಹ ಸ್ಥಾನ ಮಾನ ಹೊಂದಿರುವ ಈ ಮಣ್ಣಿನ ಕನ್ನಡ ಭಾಷೆಯನ್ನು ಪ್ರೀತಿಸಿ ಉಳಿಸಿ ಬೆಳೆಸುವದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದ ಕಸಾಪ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯರವರು ವೀರಾಜಪೇಟೆ ತಾಲೂಕು ಕಸಾಪ ಘಟಕದಿಂದ ಇದುವರೆಗೆ ತಾಲೂಕಿನ ವಿವಿಧ ಹಳ್ಳಿಗಳಲ್ಲು ವೈವಿದ್ಯಮಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ಹಬ್ಬದ ವಾತಾವರಣ ದಲ್ಲಿ ಶಾಸ್ತ್ರೀಯ ಹಾಗೂ ಜನಪದ ನೃತ್ಯಗಳೊಂದಿಗೆ ಸುಸಂಸ್ಕøತ ಕನ್ನಡ ಭಾಷೆಗೆ ಗೌರವ ನೀಡುವ ಸಲುವಾಗಿ ಈ ಕ್ಷೇತ್ರದಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸ ಲಾಗುತ್ತಿದ್ದು ಎಲ್ಲರ ಸಹಕಾರವನ್ನು ಕೋರಿದರು.
(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಪೂರ್ವ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಪಾಲ್‍ಪಾರ್‍ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಧರ್ಮದರ್ಶಿ ಚೆಕ್ಕೇರ ರಾಜಪ್ಪ ಸುಬ್ಬಯ್ಯ, ಚೆಕ್ಕೇರ ಕಾಳಯ್ಯ, ಚೆಪ್ಪುಡೀರ ಸನ್ನು ಮುದ್ದಪ್ಪ, ಬಾದುಮಂಡ ವಿಷ್ಣು, ಅಜ್ಜಮಾಡ ಲವ ಕುಶಾಲಪ್ಪ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡಜಾಗೃತಿ ಸಮಿತಿಯ ಕೊಡಗು ಜಿಲ್ಲಾ ನಿರ್ದೇಶಕಿ ಮುಲ್ಲೇಂಗಡ ರೇವತಿ ಪೂವಯ್ಯ ನಾಡಗೀತೆ ಹಾಡಿದರು. ಕಸಾಪ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಸ್ವಾಗತಿಸಿ, ಕಸಾಪ ವೀರಾಜಪೇಟೆ ತಾಲೂಕು ಘಟಕದ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ನಿರೂಪಿಸಿ ವಂದಿಸಿದರು.
ಈ ಸಂದರ್ಭ ಕುಮಾರಿ ಕಿರಣ್ ಕಾಮತ್ ರವರಿಂದ ಭರತನಾಟ್ಯ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ಜನಪದ ನೃತ್ಯ ಪ್ರದರ್ಶನ ಜನಮೆಚ್ಚಿಗೆ ಪಡೆಯಿತು.