ನಾಪೆÇೀಕ್ಲು, ಮೇ. 6: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತನೆ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಪಳಂಗಂಡ ತಂಡದೊಂದಿಗೆ ಅರೆಯಡ, ಮಂಡೇಟಿರ, ಕಾಳೇಂಗಡ, ಮೂಕೊಂಡ, ಐತಿಚಂಡ, ಮಂಡೀರ, ಚೋಕಿರ, ಕೇಲೇಟಿರ, ಚೆಕ್ಕೆರ, ಕೊಂಗಂಡ, ಕಡೇಮಾಡ ತಂಡಗಳು ಮುನ್ನಡೆ ಸಾಧಿಸಿವೆ.
ಅರೆಯಡ ಮತ್ತು ತೀತಿರ ತಂಡಗಳ ನಡುವೆ ನಡೆ ಮೊದಲ ಪಂದ್ಯದಲ್ಲಿ ಅರೆಯಡ ತಂಡ ತೀತಿರ ತಂಡವನ್ನು 3-0 ಗೋಲಿನ ಅಂತರದಿಂದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅರೆಯಡ ತಂಡದ ಪರ ಸನ್ನು ಚಿಣ್ಣಪ್ಪ ಎರಡು ಮತ್ತು ವಿವಿನ್ ಮಾದಪ್ಪ ಒಂದು ಗೋಲು ದಾಖಲಿಸಿದರು. ಮಂಡೇಟಿರ ಮತ್ತು ತೆಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಟಿರ ತಂಡವು ತೆಕ್ಕಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಮಂಡೇಟಿರ ತಂಡದ ಪರ ನಿಶಾಲ್, ವರುಣ್, ತಲಾ ಒಂದೊಂದು ಗೋಲು ದಾಖಲಿಸಿದರು. ಕಾಳೇಂಗಡ ಮತ್ತು ಚೆಯ್ಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳೇಂಗಡ ತಂಡವು ಚೆಯ್ಯಂಡ ತಂಡವನ್ನು 4-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಕಾಳೇಂಗಡ ತಂಡದ ಪರ ಪವನ್ ಚಂಗಪ್ಪ, ಎರಡು, ಯಶ್ವಿನ್ ಹಾಗೂ ಮೋನಿಶ್ ತಲಾ ಒಂದೊಂದು ಗೋಲು ದಾಖಲಿಸಿದರು. ಮೂಕೊಂಡ ಹಾಗೂ ಕೊಟ್ರಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡವು ಕೊಟ್ರಮಾಡ ತಂಡವನ್ನು 5-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಮೂಕೊಂಡ ತಂಡದ ಪರ ನಿಖಿಲ್, ಮಿನ್ ಮಾಚಯ್ಯ ತಲಾ ಎರಡು ಹಾಗೂ ರೋಶನ್ ಒಂದು ಗೋಲು ದಾಖಲಿಸಿದರೆ, ಕೊಟ್ರಮಾಡ ತಂಡದ ಪರ ರೋಶನ್ ಒಂದು ಗೋಲು ದಾಖಲಿಸಿದರು. ಕಡೇಮಾಡ ಮತ್ತು ಕರೋಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕಡೇಮಾಡ ತಂಡವು ಕರೋಟಿರ ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿತು. ಕಡೇಮಾಡ ತಂಡದ ಪರ ಚರ್ಮಣ್ಣ ಎರಡು ಮತ್ತು ಕಿಶನ್ ಕುಶಾಲಪ್ಪ ಒಂದು ಗೋಲು ದಾಖಲಿಸಿದರೆ, ಕರೋಟಿರ ತಂಡದ ಪರ ಪೂವಣ್ಣ, ಚಿಂಗ ತಲಾ ಒಂದೊಂದು ಗೋಲು ದಾಖಲಿಸಿದರು. ಐತಿಚಂಡ ಮತ್ತು ಚೇನಂಡ ತಂಡಗಳ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡವು ಚೇನಂಡ ತಂಡವನ್ನು 4-2 ಗೋಲಿನ ಅಂತರದಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐತಿಚಂಡ ತಂಡದ ಪರ ಪೂವಯ್ಯ ಎರಡು, ರಿಕಿನ್ ಉತ್ತಪ್ಪ ಮತ್ತು ಸುಜನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಚೇನಂಡ ತಂಡದ ಪರ ಮಾದಪ್ಪ, ಭರತ್ ತಲಾ ಒಂದೊಂದು ಗೋಲು ದಾಖಲಿಸಿದರು. ತಾಪಂಡ ಮತ್ತು ಮಂಡೀರ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡವು ತಾಪಂಡ ತಂಡವನ್ನು ಟೈಬ್ರೇಕರ್ನಲ್ಲಿ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಜಿ ಚಾಂಪಿಯನ್ ಪಳಂಗಂಡ ಮತ್ತು ಮುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗಂಡ ತಂಡವು 2-1 ಗೋಲಿನ ಅಂತರದಿಂದ ಮುಂಡ್ಯೋಳಂಡ ತಂಡವನ್ನು ಪರಾಭವಗೊಳಿಸಿತು. ಪಳಂಗಂಡ ತಂಡದ ಪರ ಅಮರ್ ಅಯ್ಯಮ್ಮ ಎರಡು ಗೋಲು ದಾಖಲಿಸಿದರೆ, ಮುಂಡ್ಯೋಳಂಡ ತಂಡದ ಪರ ಬೋಪಯ್ಯ ಒಂದು ಗೋಲು ದಾಖಲಿಸಿದರು.