ಮಡಿಕೇರಿ, ಮೇ 6: ಕೊಲಂಬೋದಲ್ಲಿ ನಡೆಯುತ್ತಿರುವ ಸೌತ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನ 20ರ ವಯೋಮಿತಿಯ 100 ಮೀ. ಓಟದಲ್ಲಿ ಕೊಡಗಿನ ಕಾಕೇರ ಪ್ರಜ್ವಲ್ ಮಂದಣ್ಣ 10.08 ಸೆಕೆಂಡ್‍ಗಳಲ್ಲಿ ಕ್ರಮಿಸಿ ಚಿನ್ನದ ಪದಕವನ್ನು ಪಡೆದರು. ಇವರು ಮೂಡಬಿದ್ರೆ ಆಳ್ವಾಸ್ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು, ಕಿರುಗೂರು ಗ್ರಾಮದ ಕಾಕೇರ ರವಿ-ತಾರ ದಂಪತಿಗಳ ಪುತ್ರ.