ಕೂಡಿಗೆ, ಮೇ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದಲ್ಲಿ ಪ್ರಗತಿ ನಿಧಿಸಾಲ ಪಡೆದುಕೊಂಡು ವಿನಿಯೋಗದಾರ ಮರಣ ಹೊಂದಿರುವ ಕುಟುಂಬಗಳಿಗೆ ಮರಣ ಸಾಂತ್ವನ ಧನವನ್ನು ಕೂಡಿಗೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ವಿತರಿಸಿದರು.

ಕೂಡಿಗೆ ವಲಯದ ಮುಳ್ಳುಸೋಗೆ ಕಾರ್ಯಕ್ಷೇತ್ರದ ಕಲ್ಪವೃಕ್ಷ ಸ್ವಸಹಾಯ ಸಂಘದ ಸದಸ್ಶೆ ಕಲಾರವರ ಪತಿ ಕಾಂತರಾಜು ಮರಣ ಹೊಂದಿದ್ದು ಅವರ ಕುಟುಂಬಕ್ಕೆ ಪ್ರಗತಿನಿಧಿ ಜೀವಭದ್ರತೆ ಕಾರ್ಯಕ್ರಮದಡಿಯಲ್ಲಿ ರೂ. 85,000, ಗೊಂದಿಬಸವನಹಳ್ಳಿ ಕಾರ್ಯಕ್ಷೇತ್ರದ ಭಗವತಿ ಸ್ವಸಹಾಯ ಸಂಘದ ರೇಣುಕಾ ಅವರ ಪತಿ ರಾಮು ಮರಣ ಹೊಂದಿದ್ದು ಪ್ರಗತಿನಿಧಿ ಜೀವ ಭದ್ರತೆ ಕಾರ್ಯಕ್ರಮದಡಿಯಲ್ಲಿ ರೂ. 1,45,000, ಹಾಗೂ ಗಗನ ಸ್ವಸಹಾಯ ಸಂಘದ ಶೀಲಾರವರ ಪತಿ ವಿಶ್ವ ಮರಣಹೊಂದಿದ್ದು ಪ್ರಗತಿನಿಧಿ ಜೀವ ಭದ್ರತೆ ಕಾರ್ಯಕ್ರಮದಡಿಯಲ್ಲಿ ರೂ. 1.50 ಲಕ್ಷ ಮರಣ ಸಾಂತ್ವಾನ ಧನ ನೀಡಲಾಗಿದೆ.

ಒಟ್ಟು ಮೂರು ಲಕ್ಷದ 80 ಸಾವಿರ ಸಹಾಯಧನವನ್ನು ವಿತರಿಸಿ ಸದಸ್ಶರು ಕುಟುಂಬದ ಅಭಿವೃದ್ಧಿಗಾಗಿ ಪಡೆಯುತ್ತಿರುವ ಪ್ರಗತಿನಿಧಿಸಾಲಕ್ಕೆ ಯೋಜನೆಯು ನೀಡುತ್ತಿರುವ ಜೀವ ಭದ್ರತೆ ಕಾರ್ಯಕ್ರಮದಿಂದಾಗಿ ಸಾಲಗಾರ ಅಥವಾ ಸಾಲವನ್ನು ವಿನಿಯೋಗ ಮಾಡಿದ ಕುಟುಂಬದ ಸದಸ್ಶ ಮರಣ ಹೊಂದಿದ್ದಲ್ಲಿ ಕುಟುಂಬದ ಇತರ ಸದಸ್ಯರಿಗೆ ಹಾಗೂ ಗುಂಪಿನ ಸದಸ್ಯದ ಸಾಲದ ಹೊರೆ ಆಗದಂತೆ ಜೀವ ಭದ್ರತೆಯನ್ನು ಮಾಡಲಾಗುತ್ತಿದ್ದು ಎಲ್ಲಾ ಸದಸ್ಶರೂ ತಾವು ತೆಗೆದುಕೊಳ್ಳುವ ಪ್ರತಿಯೊಂದು ಸಾಲಕ್ಕೂ ಜೀವಭದ್ರತೆ ಶುಲ್ಕವನ್ನು ಪಾವತಿಸಿ ಭದ್ರತೆ ಮಾಡಿಕೊಳ್ಳುವಂತೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾಹಿತಿ ನೀಡಿದರು.

ಈ ಸಂದರ್ಭ ನಗದು ಸಂಗ್ರಹಕ ಅಭಿಶೇಕ್, ಸೇವಾ ಪ್ರತಿನಿಧಿಗಳಾದ ರಾಧ, ಶಶಿಕಲಾ, ಸುನೀತಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.