ಸಿದ್ದಾಪುರ, ಮೇ 6: ಶ್ರೀ ಮುತ್ತಪ್ಪನ್ ಯುವ ಕಲಾ ಸಮಿತಿಯ ಸದಸ್ಯರುಗಳು ಕಾರ್ಮಿಕ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿ ಕಾವೇರಿ ನದಿಯ ದಡದ ಉದ್ದಕ್ಕೂ ಸ್ವಚ್ಛಗೊಳಿಸಿದರು.
ನದಿ ದಡಗಳಲ್ಲಿ ಕೊಳೆತು ನಾರುತಿದ್ದ ತ್ಯಾಜಗಳನ್ನು ತೆಗೆದು ಸೇತುವೆಯ ಹಾಗೂ ನದಿ ದಡಗಳಲ್ಲಿ ಬೆಳೆದಿದ್ದ ಗಿಡ ಗಂಟುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಮಿತಿ ಸದಸ್ಯ ಪ್ರವೀಣ್ ಗ್ರಾ.ಪಂ. ಕಸ ವಿಲೇವಾರಿ ಮಾಡಲು ಸೂಕ್ತ ಜಾಗ ನೀಡದ ಹಿನ್ನೆಲೆ ಸಾರ್ವಜನಿಕರು ಕಸಗಳನ್ನು ರಸ್ತೆ ಹಾಗೂ ನದಿ ದಡಗಳಲ್ಲಿ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಗ್ರಾ.ಪಂ. ನೇರ ಹೊಣೆ ಎಂದು ಆರೋಪಿಸಿದರು.