ಕುಶಾಲನಗರ, ಮೇ 6: ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಜಲಾಶಯದಲ್ಲಿ ಗುರುವಾರ ವೇಳೆಗೆ 1.030 ಟಿಎಂಸಿ ನೀರಿನ ಸಂಗ್ರಹ ಕಂಡುಬಂದಿದೆ. ಜಲಾಶಯಕ್ಕೆ 92 ಕ್ಯೂಸೆಕ್ ಪ್ರಮಾಣದ ನೀರು ಬರುತ್ತಿದೆ. ಅಚ್ಚುಕಟ್ಟು ವ್ಯಾಪ್ತಿಯ ರೈತರ ಬೆಳೆಗೆ ನೀರಿನ ಕೊರತೆ ಎದುರಾಗಿದೆ.