ಕುಶಾಲನಗರ, ಮೇ 7: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಮಾಲು ಸಹಿತ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ 10:30 ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿ ಸಿಬ್ಬಂದಿಗಳು ಕುಶಾಲನಗರ ಆನೆಕಾಡು ಬಳಿ ಮುಖ್ಯರಸ್ತೆಯಲ್ಲಿ ಲಾರಿಯನ್ನು ತಡೆದಿದ್ದಾರೆ.
ಪರಿಶೀಲನೆ ಸಂದರ್ಭ ಚಾಲಕ ಪರಾರಿಯಾಗಿದ್ದು ಲಾರಿಯಲ್ಲಿದ್ದ (ಕೆಎ.19.ಎಸಿ.7101) ರು 5 ಲಕ್ಷ ಮೌಲ್ಯದ 6 ಹೊನ್ನೆ ನಾಟ ಸಹಿತ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್, ಉಪ ವಲಯಾಧಿಕಾರಿ ರಂಜನ್ ಮತ್ತು ಸಿಬ್ಬಂದಿಗಳು ಇದ್ದರು.