ನಾಪೋಕ್ಲು, ಮೇ 7: ಸಂತೆ ದಿನವಾದ ಇಂದು ನಾಪೋಕ್ಲುವಿನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಪ್ರಚಾರ ನಡೆಸುವದರೊಂದಿಗೆ ಸಾರ್ವಜನಿಕರಿಂದ ಮತಯಾಚಿಸಿದರು.

ಗೆದ್ದರೆ ನಾಪೆÇೀಕ್ಲು ತಾಲೂಕು : ಭರವಸೆ

ಪೆÇನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ರಚನೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ. ನನ್ನನ್ನು ಗೆಲ್ಲಿಸಿದರೆ ನಾಪೆÇೀಕ್ಲು ತಾಲೂಕು ರಚನೆಗೆ ಶ್ರಮಿಸುವದಾಗಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚೆಪ್ಪುಡಿರ ಅರುಣ್ ಮಾಚಯ್ಯ ಭರವಸೆ ನೀಡಿದರು.

ಕಾಫಿ ಮತ್ತು ಕಾಳು ಮೆಣಸು ಬೆಲೆ ಕುಸಿತಕ್ಕೆ ಕೇಂದ್ರದ ಬಿಜೆಪಿ ಸರಕಾರವೇ ಕಾರಣ ಎಂದು ನೇರವಾಗಿ ಆರೋಪಿಸಿರುವ ಅರುಣ್ ಮಾಚಯ್ಯ ವಿಯಟ್ನಾಂನ ಕಾಳು ಮೆಣಸನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿರುವದಕ್ಕೆ ಕೊಡಗಿನ ಬಿಜೆಪಿ ಶಾಸಕರು ಕಾರಣ ಎಂದು ಇಲ್ಲಿನ ಪ್ರಚಾರ ಸಭೆಯಲ್ಲಿ ಆರೋಪಿಸಿದರು. ಸಭೆಯಲ್ಲಿ ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿದರು.

ಈ ಸಂದರ್ಭ ಮುಖಂಡರಾದ ಬಿದ್ದಾಟಂಡ ತಮ್ಮಯ್ಯ, ಪಿ.ಯಂ.ಖಾಸಿಂ, ಅಬ್ದುಲ್ ರಹಿಮಾನ್, ರಮಾನಾಥ್ ಬೇಕಲ್, ಕೊಲ್ಯದ ಗಿರೀಶ್, ಕೆ.ಎ.ಇಸ್ಮಾಯಿಲ್, ಮಾಚೆಟ್ಟಿರ ಕುಶು ಕುಶಾಲಪ್ಪ, ಕಾಳೆಯಂಡ ಸಾಬಾ ತಿಮ್ಮಯ್ಯ, ಚೋಕಿರ ರೋಶನ್, ಸಲೀಂ ಹ್ಯಾರೀಶ್, ಬಾಚಮಂಡ ಲವ ಚಿಣ್ಣಪ್ಪ, ಸೌಕತ್ ಅಲಿ, ಮತ್ತಿತರ ಕಾರ್ಯಕರ್ತರು ಇದ್ದರು.

ಅಭಿವೃದ್ಧಿಗೆ ಮತ ನೀಡಲು ಕರೆ

ಹಿಂದೆ ಬಿಜೆಪಿ ಸರಕಾರವಿದ್ದಾಗ ಗ್ರಾಮೀಣ ರಸ್ತೆ ಸೇರಿದಂತೆ ದೇವಾಲಯ, ಮಸೀದಿ ಹಾಗೂ ಮಂದಿರಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿಗೆ ಮತ ನೀಡುವದರ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕೆಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹೇಳಿದರು. ನಾಪೆÇೀಕ್ಲು ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ತÀನ್ನನ್ನು ಈ ಕ್ಷೇತ್ರದಲ್ಲಿ ಮೂರು ಬಾರಿ ಆರಿಸಿದ್ದೀರಿ. ಈ ಬಾರಿಯು ನನಗೆ ಮತ ನೀಡಿ ಗೆಲ್ಲಿಸಬೇಕು. ಜನತೆಯ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಕೇರಳ ರಾಜ್ಯದ ಬಿಜೆಪಿ ಮುಖಂಡ ಸುನಂದ ರಾಜ್ಯ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಬೋಸ್ ದೇವಯ್ಯ, ಮುಖಂಡರಾದ ಬಾಂಡ್ ಗಣಪತಿ, ಕಾಂತಿ ಬೆಳ್ಯಪ್ಪ, ಬೀನ ಬೊಳ್ಳಮ್ಮ, ತೆಕ್ಕಡೆ ಶೋಭಾ ಮೋಹನ್, ಉಷಾ ದೇವಮ್ಮ, ರಮೇಶ್ ಮುದ್ದಯ್ಯ, ಕೋಡಿರ ಪ್ರಸನ್ನ, ಅಂಬಿ ಕಾರ್ಯಪ್ಪ, ಸೇವ್ ಕೊಡಗು ಫಾರಂನ ಬಿದ್ದಾಟಂಡ ದಿನೇಶ್, ಜಿನ್ನು ನಾಣಯ್ಯ, ತಾ.ಪಂ ಸದಸ್ಯರಾದ ಉಮಾ ಪ್ರಭು ಸೇರಿದಂತೆ ಮತ್ತಿತರರು ಇದ್ದರು. ಸಭೆಯಲ್ಲಿ ಕಾಂಗ್ರೆಸಿನ ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಭರವಸೆ

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘ ಹಾಗೂ ಸ್ವಸಹಾಯ ಸಂಘಗಳ ಸಾಲ ಸೇರಿದಂತೆ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಲಾಗುವದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ನಾಪೆÇೀಕ್ಲು ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಇಡೀ ದೇಶದ ಜನತೆಯ ಮೇಲೆ ಗಧಾ ಪ್ರಹಾರ ನಡೆಸಿದೆ. ಕಾಂಗ್ರೆಸ್ ಕೊಡಗು ಜಿಲ್ಲೆಯನ್ನು ಅನಾಥ ಮಾಡಿದೆ ಎಂದರು. ಜಿಲ್ಲೆಯಲ್ಲಿ 41 ಜನ ಆನೆ ಧಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 106 ಜನ ಅಂಗವಿಕಲರಾಗಿದ್ದಾರೆ. 190 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ರೂ. ಬೆಳೆ ಹಾನಿಯಾಗಿದೆ. ಸರಕಾರ ಇವರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೆÇನ್ನಪ್ಪ ಮಾತನಾಡಿ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆಯಾಗಿದ್ದ ಸಂದರ್ಭ 3600 ಬಡವರ ಮನೆಗೆ ಸೋಲಾರ್ ದೀಪ ಹಾಗೂ 3800 ಬಡವರಿಗೆ ಉಚಿತ ಗ್ಯಾಸ್ ವಿತರಿಸಿದ್ದೇನೆ. ಇದನ್ನು ಕಾಂಗ್ರೆಸ್ ಸರಕಾರ ತನ್ನ ಸಾಧನೆ ಎಂದು ಬಿಂಬಿಸುತ್ತಿದೆ. ಇದು ಯಾವ ಪಕ್ಷದ, ಮುಖಂಡರ ಸಾಧನೆಯಲ್ಲ. ತನ್ನ ಸ್ವಂತ ಹಣದಿಂದ ಬಡವರ ಕಷ್ಟ ನಿವಾರಣೆಗೆ ನೀಡಿದ್ದಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ, ಮಾಂಗೆರ ಪೆÇನ್ನಪ್ಪ, ಗಾಣಂಗಡ ಡಾಲಿ, ರಷೀದ್, ಕೆ.ಹೆಚ್.ಮಹಮ್ಮದ್, ಕುಡಿಯರ ಮುತ್ತಪ್ಪ, ಇಂತ್ಯಾಜ್ ಇದ್ದರು.