ಕುಶಾಲನಗರ, ಮೇ 7: ವಿದ್ಯುತ್ ವೋಲ್ಟೇಜ್ ಅಭಾವ ತಲೆದೋರುವುದರೊಂದಿಗೆ ಸಾವಿರಾರು ರೂ. ಮೌಲ್ಯದ ಬಟ್ಟೆಬರೆಗಳು ನಾಶಗೊಂಡ ಅವಾಂತರ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 10 ದಿನಗಳಿಂದ ಕೊಪ್ಪ ವ್ಯಾಪ್ತಿಯ ವಾರ್ಡ್ ಒಂದರಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೆಟ್ಟು ನಿಂತಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಬಟ್ಟೆ ಬರೆ ತೊಳೆಯಲು ಇಲ್ಲಿನ ನಿವಾಸಿಗಳು ವಾಶಿಂಗ್ ಮೆಷಿನ್ನಲ್ಲಿ ಬೆಲೆಬಾಳುವ ಬಟ್ಟೆಗಳನ್ನು ಹಾಕಿದ್ದು ಈ ಸಂದರ್ಭ ಏಕಾಏಕಿ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಸಿಡಿಲು ಬಡಿದಿದೆ. ಇದರಿಂದ ವಿದ್ಯುತ್ ಸರಬರಾಜು ಏರುಪೇರಾಗಿದೆ. ಇದರ ಪರಿಣಾಮವಾಗಿ ವಾಶಿಂಗ್ ಮೆಷಿನ್ನಲ್ಲಿ ಸಿಲುಕಿಕೊಂಡ ಬಟ್ಟೆ ಬರೆಗಳು ತೊಳೆಯುವ ಸಂದರ್ಭ ಮೆಷಿನ್ನಲ್ಲಿ ಸಿಲುಕಿಕೊಂಡಿದ್ದು ಇವುಗಳನ್ನು ಹೊರ ತೆಗೆಯಲು ಈ ಭಾಗದ ಗೃಹಿಣಿಯರು ಹರಸಾಹಸ ಪಡುವಂತಾಗಿದೆ.
ತಾಂತ್ರಿಕ ತೊಂದರೆಗಳಿಂದ ಸಿಂಗಲ್ ಫೇಸ್ ವಿದ್ಯುತ್ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ವಾಶಿಂಗ್ ಮೆಷಿನ್ ಕೆಲಸ ನಿರ್ವಹಿಸದೆ ಬಟ್ಟೆ ಬರೆಗಳು ಯಂತ್ರದ ಒಳಗೆ ಸಿಲುಕಿಕೊಂಡಿದ್ದು ಹೊರತೆಗೆಯಲಾಗದೆ ಈ ಭಾಗದ ಹಲವು ಮನೆಗಳಲ್ಲಿ ಮಹಿಳೆಯರು ಚೆಸ್ಕಾಂ ಸಂಸ್ಥೆಗೆ ಹಿಡಿಶಾಪ ಹಾಕುತ್ತಿರುವದು ಕಂಡುಬಂದಿದೆ. ವಾಷಿಂಗ್ ಮೆಷಿನ್ನಲ್ಲಿ ಆಟೋಮೆಟಿಕ್ ವ್ಯವಸ್ಥೆ ಇರುವ ಹಿನೆÀ್ನಲೆಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜಾಗದೆ ಈ ಅವಾಂತರಕ್ಕೆ ಕಾರಣವಾಗಿದೆ.