ನಾಪೆÇೀಕ್ಲು, ಮೇ. 7: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತೆರಡನೇ ದಿನದ ಪಂದ್ಯಾಟದಲ್ಲಿ ಸೋಮೆಯಂಡ ತಂಡದ ಪರ ಸುಜು ಹ್ಯಾಟ್ರಿಕ್ ಮೂರು ಗೋಲು ದಾಖಲಿಸಿ ಎಲ್ಲರ ಗಮನ ಸೆಳೆದರು.

ಸೋಮವಾರ ನಡೆದ ಪಂದ್ಯಾಟದಲ್ಲಿ ಕೋಡಿಮಣಿಯಂಡ, ಐನಂಡ, ಚೌರೀರ (ಹೊದ್ದೂರು), ಚೆಪ್ಪುಡಿರ, ಸುಳ್ಳಿಮಾಡ, ಕರಿನೆರವಂಡ, ಮಾತಂಡ, ಶಾಂತೆಯಂಡ, ಸೋಮೆಯಂಡ, ಚೇಂದಿರ, ಕುಮ್ಮಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಕೋಡಿಮಣಿಯಂಡ ಮತ್ತು ಕಟ್ಟೆರ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ಕಟ್ಟೆರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ತಂಡದ ಪರ ವಿವೇಕ್ ಉತ್ತಪ್ಪ ಎರಡು, ಪೂಣಚ್ಚ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಬೊಳ್ಳಂಡ ಮತ್ತು ಐನಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಐನಂಡ ತಂಡವು ಬೊಳ್ಳಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ ಮಣಿಸಿತು. ಚೌರೀರ (ಹೊದ್ದೂರು) ಮತ್ತು ಬೊಳ್ಳಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಬೊಳ್ಳಚಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ ಸೋಲಿಸಿತು. ಚೆಪ್ಪುಡಿರ ಮತ್ತು ಬಾದುಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಬಾದುಮಂಡ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ವಚನ್, ಸೋಮಣ್ಣ ತಲಾ ಎರಡೆರಡು ಗೋಲು, ಚೇತನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಸುಳ್ಳಿಮಾಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡ ತಂಡವು ಬಿದ್ದಂಡ ತಂಡವನ್ನು ಟೈ ಬ್ರೇಕರ್‍ನ 5-4 ಗೋಲಿನಿಂದ ಸೋಲಿಸಿತು. ಕರಿನೆರವಂಡ ಮತ್ತು ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ ತಂಡವು ಕೊಟ್ಟಂಗಡ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಕರಿನೆರವಂಡ ತಂಡದ ಪರ ಬಿದ್ದಪ್ಪ, ಲಿತೇಶ್ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮಾತಂಡ ಮತ್ತು ಮೇಚಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾತಂಡ ತಂಡವು ಮೇಚಿಯಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ತಂಡದ ಪರ ಸೂರಜ್ ಒಂದು ಗೋಲು ದಾಖಲಿಸಿದರು. ಶಾಂತೆಯಂಡ ಮತ್ತು ಚೀಯಕಪೂವಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಶಾಂತೆಯಂಡ ತಂಡವು ಚೀಯಕಪೂವಂಡ ತಂಡವನ್ನು ಟೈ ಬ್ರೇಕರ್‍ನ 6-4 ಗೋಲಿನ ಅಂತರದಿಂದ ಸೋಲಿಸಿತು. ಸೋಮೆಯಂಡ ಮತ್ತು ಮುಕ್ಕಾಟಿರ (ಹರಿಹರ) ತಂಡಗಳ ನಡುವಿನ ಪಂದ್ಯದಲ್ಲಿ ಸೋಮೆಯಂಡ ತಂಡವು ಮುಕ್ಕಾಟಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಸೋಮೆಯಂಡ ತಂಡದ ಪರ ಸುಜು ಹ್ಯಾಟ್ರಿಕ್ ಮೂರು ಗೋಲು ದಾಖಲಿಸಿದರೆ, ಮುಕ್ಕಾಟಿರ ತಂಡದ ಪರ ಮಂದಣ್ಣ ಒಂದು ಗೋಲು ದಾಖಲಿಸಿದರು. ಚೇಂದಿರ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಿರ ತಂಡವು ಕಾಯಪಂಡ ತಂಡವನ್ನು 4-0 ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಪ್ರೀತಂ ಪೂವಯ್ಯ ಮೂರು, ಪುನೀತ್ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರು. ಕುಮ್ಮಂಡ ಮತ್ತು ತೀತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕುಮ್ಮಂಡ ತಂಡವು ತೀತಮಾಡ ತಂಡವನ್ನು ಟೈ ಬ್ರೇಕರ್‍ನ 3-2 ಗೋಲಿನಿಂದ ಸೋಲಿಸಿತು.