ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರು ಭಾಷಣ ಮಾಡುತ್ತಿದ್ದ ಸಂದರ್ಭ ಸರ್ಕಾರಿ ಆಸ್ಪತ್ರೆಯಿಂದ ರೋಗಿಯೋರ್ವರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತಿತ್ತು. ಸೈರನ್ ಮೊಳಗಿಸಿಕೊಂಡು ಆಂಬ್ಯುಲೆನ್ಸ್ ರಸ್ತೆಯಲ್ಲಿ ಸಾಗಿತು. ಈ ಸಂದರ್ಭ ಕೆಲ ಸೆಕೆಂಡ್‍ಗಳ ಕಾಲ ಭಾಷಣ ನಿಲ್ಲಿಸಿದ ಸಚಿವರು, ಆಂಬುಲೆನ್ಸ್‍ನಲ್ಲಿರುವವರು ಬೇಗ ಚೇತರಿಸಿಕೊಳ್ಳಲು ಭಗವಂತನಲ್ಲಿ ಆಶಿಸುತ್ತೇನೆ ಎಂದು ಹಾರೈಸಿದರು. ಇದರಿಂದ ಪುಳಕಿತರಾದ ಕಾರ್ಯಕರ್ತರು ಜಯಕಾರದೊಂದಿಗೆ ಚಪ್ಪಾಳೆ ಹೊಡೆದರು.
ಕ್ಯಾಂಟೀನ್‍ನಲ್ಲಿ ಕಾಫಿ: ಭಾಷಣದ ನಂತರ ಬಸ್‍ನಿಲ್ದಾಣ ದಲ್ಲಿರುವ ಅಭಿಷೇಕ್ ಗೋವಿಂದಪ್ಪ ಅವರ ರಾಘವೇಂದ್ರ ಕ್ಯಾಂಟಿನ್‍ಗೆ ತೆರಳಿ ಕೊಡಗಿನ ಕಾಫಿ ಸವಿದರು. ಸಾಮಾನ್ಯರಂತೆ ಕೇಂದ್ರ ಸಚಿವರು ಕ್ಯಾಂಟೀನ್‍ಗೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಆವಕ್ಕಾದರು. ಸ್ಮøತಿ ಇರಾನಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸರಳತೆಯನ್ನು ಕೊಂಡಾಡಿದರು.