ಸೋಮವಾರಪೇಟೆ : ಮತದಾನದ ಮಹತ್ವದ ಕುರಿತು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷನ್‍ನ ಜಿಲ್ಲಾ ವ್ಯವಸ್ಥಾಪಕ ಎಂ.ರಮೇಶ್ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ಮಾಡುವ ನಿಟ್ಟಿನಲ್ಲಿ 18ವರ್ಷ ಪೂರ್ಣಗೊಂಡವರೆಲ್ಲ ಮತದಾನ ಮಾಡಬೇಕು. ಹಣ ಮತ್ತಿತರ ಆಮಿಷಗಳಿಗೆ ಬಲಿಯಾಗಬಾರದು ಎಂದು ಕರೆ ನೀಡಿದರು.

ಎಲ್‍ಇಡಿ ಪರದೆಯ ವಾಹನದ ಮೂಲಕ ಪಟ್ಟಣದ ಮುಖ್ಯಬೀದಿಗಳಲ್ಲಿ ಮತದಾನದ ಮಹತ್ವದ ಕುರಿತು ಜನಜಾಗೃತಿ ಜಾಥಾ ಮತ್ತು ಮಾಹಿತಿಯನ್ನು ನೀಡಲಾಯಿತು. ನಂತರ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಪ್ಯಾಟ್ ಬಳಸುವ ಕುರಿತು ತಾಲೂಕಿನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಲಾಯಿತು. ಈ ಸಂದರ್ಭ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಬಿ.ಸಿ.ಚಿಟ್ಟಿಯಪ್ಪ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಎ.ಸಿ.ಅಪ್ಪಣ್ಣ, ಪದ್ಮಶ್ರೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾಲೂಕು ಪಂಚಾಯಿತಿ ಅಧಿಕಾರಿ ಸುನಿಲ್, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಮೇರಿ ಅಂಬುದಾಸ್, ರಾಜ್ಯ ಸಮಿತಿ ಸದಸ್ಯೆ ರೆಹನಾ ಸುಲ್ತಾನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶೈಲಾ ಪಾಲ್ಗೊಂಡಿದ್ದರು. ಗೋಣಿಕೊಪ್ಪಲು : ಸಜ್ಜನ ರಾಜಕಾರಣಿಯಾಗಿ ಸಮಾಜ ಸೇವಕರಾಗಿ ಕೆಲಸ ಮಾಡುತ್ತಿರುವ ಸಂಕೇತ್ ಪೂವಯ್ಯ ಅವರಿಗೆ ಈ ಬಾರಿ ಮತ ನೀಡುವ ಮೂಲಕ ಆಶೀರ್ವಾದ ಮಾಡುವಂತೆ ಜೆಡಿಎಸ್ ಪ್ರಧಾನ ಕಾಂiÀರ್iದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ ಮನವಿ ಮಾಡಿದರು. ಗೋಣಿಕೊಪ್ಪಲಿನ ಬಸ್ ನಿಲ್ದಾಣದಲ್ಲಿ ನಡೆದ ಜೆಡಿಎಸ್ ಪ್ರಚಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಬಾರಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಯಾಗುವುದರಲ್ಲಿ ಸಂಶಯವಿಲ್ಲ. ಬಡಜನರ, ರೈತರ, ಕಾಫಿ ಬೆಳೆಗಾರರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ದುಡಿದಿರುವ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹೆಚ್.ವಿ. ಜಯಮ್ಮ ಮಾತನಾಡಿ ದಲಿತರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ನೀಡಲಿದ್ದು, ಗೆಲುವಿಗೆ ಅನುಕೂಲವಾಗಲಿದೆ ಎಂದರು. ಜೆಡಿಎಸ್ ಮುಖಂಡ ಶರತ್ ಕಾಂತ್ ಮಾತನಾಡಿದರು.

ಕೆದಮುಳ್ಳೂರುವಿನಲ್ಲಿ ಜೆಡಿಎಸ್ ಚುನಾವಣಾ ಕಚೇರಿ ಆರಂಭವೀರಾಜಪೇಟೆ : ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿರುವ ಯೋಜನೆಗಳು ಪ್ರತಿಯೊಂದು ಹಂತದಲ್ಲಿ ಜನತೆಯ ಪರವಾಗಿದ್ದು ರೈತರು, ಕಾರ್ಮಿಕರು, ಬೆಳೆಗಾರರು, ಸಮಾಜದ ಬಡವರು, ಕಡುಬಡವರು, ಕಾಡಾನೆ ಧಾಳಿಯ ಸಂತ್ರಸ್ತರಿಗೆ ಪ್ರಯೋಜನವಾಗಲಿದೆ. ಎಂದು ಪಕ್ಷದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು. ತಾಲೂಕಿನ ಕೆದಮುಳ್ಳೂರಿನ ಮೂರು ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದ ಪದ್ಮಿನಿ ಪೊನ್ನಪ್ಪ ಸಮಾಜದ ಪ್ರತಿಯೊಂದು ವರ್ಗಕ್ಕೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪಕ್ಷ ಈಗಲೇ ಯೋಜನೆ ಹಾಕಿಕೊಂಡಿದೆ. ಜನತಾದಳವನ್ನು ಜನತೆ ಈ ಬಾರಿ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದರು. ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಮತದಾರರಿಗೆ ಪಕ್ಷದ ಯೋಜನೆಗಳ ಅರಿವಾಗಿದೆ. ಆನೆ ಮಾನವ ಸಂಘರ್ಷಕ್ಕೆ ಅಂತ್ಯ ಹಾಡಲು ಜನತಾದಳ ಪಕ್ಷದಿಂದ ಸಾಧ್ಯ ಎಂದು ಹೇಳಿದರು. ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಎಂ.ಕೆ.ಪೂವಯ್ಯ, ಬಿ.ಸುಜು, ಮಾತಂಡ ಚಂಗಪ್ಪ, ಕಿಶೋರ್, ದಿನೇಶ್, ಕೆ.ಉತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಚಾಮಿಯಾಲದಲ್ಲಿ ಜೆಡಿಎಸ್ ಪ್ರಚಾರ

ವೀರಾಜಪೇಟೆ : ಇಲ್ಲಿನ ಚಾಮಿಯಾಲದಲ್ಲಿ ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್. ಎಚ್. ಮತೀನ್ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ಮಾಡಿದರು. ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರು ಅಲ್ಪ ಸಂಖ್ಯಾತರನ್ನುದ್ದೇಶಿಸಿ ಮಾತನಾಡಿದರು. ಚಾಮಿಯಾಲದ ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿಯೂ ಮುಖ್ಯಸ್ಥರು, ಸಿಬ್ಬಂದಿಗಳನ್ನು ಭೇಟಿ ಮಾಡಿ ಮತ ಹಾಕುವಂತೆ ಕೋರಿದರು. ಚಾಮಿಯಾಲ್‍ನ ಕೆ. ಹೆಚ್. ಸೈಪುದ್ದೀನ್, ಶಮೀರ್, ಮಜೀದ್, ಕುವಲೆ ಹಂಸ, ಇಟ್ಟೀರ ಸಂಪತ್, ಬಾಳೆಕುಟ್ಟೀರ ದಿನ್ನಿ ಬೋಪಯ್ಯ, ಅಮ್ಮಂಡ ವಿವೇಕ್ ಮತ್ತಿತರರು ಹಾಜರಿದ್ದರು.

ಜೆಡಿಎಸ್‍ಗೆ ಆಯ್ಕೆ

ಸೋಮವಾರಪೇಟೆ, ಮೇ. 7: ಜೆಡಿಎಸ್‍ನ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಗೋಣಿಮರೂರು ಗ್ರಾಮದ ಕೆ.ಇ.ರೇಖಾ ಆಯ್ಕೆಯಾಗಿ ದ್ದಾರೆ ಎಂದು ಮಹಿಳಾ ಘಟಕ ಅಧ್ಯಕ್ಷೆ ಜಾನಕಿ ವೆಂಕಟೇಶ್ ತಿಳಿಸಿದ್ದಾರೆ.

ಮುಳ್ಳುಸೋಗೆ ಗ್ರಾಪಂನ ವಲಯ ಮಟ್ಟದ ಜೆಡಿಎಸ್‍ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಎಂ. ಪಿ. ಸಂಗೀತ ಆಯ್ಕೆಯಾಗಿದ್ದಾರೆ.

ಮತ ಯಂತ್ರ ಮಾಹಿತಿ ಕಾರ್ಯಾಗಾರ

ಸೋಮವಾರಪೇಟೆ : ಜಿಲ್ಲಾ ಪಂಚಾಯಿತಿಯ ಸ್ವಚ್ಚ ಭಾರತ್ ಮಿಷನ್, ಸ್ವೀಪ್ ಸಮಿತಿ ವತಿಯಿಂದ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಮತಯಂತ್ರದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಜಿಲ್ಲಾ ವ್ಯವಸ್ಥಾಪಕ ಎಂ.ರಮೇಶ್ ಮಾತನಾಡಿ, ಇತ್ತೀಚೆಗೆ ಜನರಲ್ಲಿ ಮತಯಂತ್ರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿರುವದರಿಂದ ಮತಯಂತ್ರಕ್ಕೆ ವಿವಿ ಪ್ಯಾಟ್ ಅಳವಡಿಸಲಾಗಿದೆ. ಇದರಿಂದ ಮತದಾರರು ಮತದಾನ ಮಾಡಿದ ತಕ್ಷಣ ಯಂತ್ರದಲ್ಲಿ 7 ಸೆಕೆಂಡ್‍ಗಳ ಕಾಲ ತಾವು ಮಾಡಿರುವ ಅಭ್ಯರ್ಥಿಗಳ ಹೆಸರು ಮತ್ತು ಗುರುತಿನ ಚಿತ್ರ ಪ್ರಕಟಗೊಳ್ಳಲಿದೆ. ಇದರಿಂದಾಗಿ ಮತಯಂತ್ರ ಕಾರ್ಯನಿರ್ವಹಿಸುವ ಬಗ್ಗೆ ಅರಿವು ಮೂಡುತ್ತದೆ ಎಂದರು.

ಈ ಸಂದರ್ಭ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಬಿ.ಸಿ. ಚಿಟ್ಟಿಯಪ್ಪ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಎ.ಸಿ.ಅಪ್ಪಣ್ಣ, ಪದ್ಮಶ್ರೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾಲೂಕು ಪಂಚಾಯಿತಿ ಅಧಿಕಾರಿ ಸುನಿಲ್, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ, ಮೇರಿ ಅಂಬುದಾಸ್, ರಾಜ್ಯ ಸಮಿತಿ ಸದಸ್ಯೆ ರೆಹನಾ ಸುಲ್ತಾನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶೈಲಾ ಇದ್ದರು.

ಬಿಜೆಪಿಗೆ ಸೇರ್ಪಡೆ ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ ದೇವರಾಜ್ ಮತ್ತು ವೆಂಕಟೇಶ್ ಅವರು ಕಾಂಗ್ರೆಸ್ ಪಕ್ಷ ತೊರೆದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಪಿ. ಅಪ್ಪಚ್ಚುರಂಜನ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು. ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯ ಬಾಸ್ಕರ್‍ನಾಯಕ್, ಪಕ್ಷದ ಕಾರ್ಯಕರ್ತರಾದ ಗಿರೀಶ್, ಮಿಥುನ್, ಸುನೀಲ್ ಮತ್ತಿತರರು ಇದ್ದರು

ಗೆಲುವು ಖಚಿತ : ಪುಷ್ಪಲತಾ ವಿಶ್ವಾಸ ಮಡಿಕೇರಿ : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ಬಿರುನಾಣಿ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧೆಡೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ..ಎಸ್.ಅರುಣ್ ಮಾಚಯ್ಯ ಅವರ ಪರ ಮತಯಾಚನೆ ನಡೆಯಿತು. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಿ. ಆರ್. ಪುಷ್ಪಲತಾ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಡೇಮಾಡ ಕುಸುಮಾ ಅವರ ನೇತೃತ್ವದಲ್ಲಿ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಜಿ. ಆರ್. ಪುಷ್ಪಲತಾ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಡಗಿನ ಜನ ಬದಲಾವಣೆಯನ್ನು ಬಯಸಿದ್ದು, ಸಿ.ಎಸ್.ಅರುಣ್ ಮಾಚಯ್ಯ ಹಾಗೂ ಕೆ.ಪಿ.ಚಂದ್ರಕಲಾ ಅವರುಗಳು ಶಾಸಕರಾಗಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪುಷ್ಪಲತಾ ಹೇಳಿದರು.

ಉಪಾಧ್ಯಕ್ಷರಾಗಿ ಆಯ್ಕೆ

ನಾಪೆÇೀಕ್ಲು : ಹೊದವಾಡ ಗ್ರಾಮದ ಬಿ. ಎ.ಸುಲೈಮಾನ್ ಅವರನ್ನು ಜಿಲ್ಲಾ ಜಾತ್ಯಾತೀತ ಜನತಾದಳದ ಉಪಾಧ್ಯಕ್ಷರಾಗಿ ಆಯ್ಕೆಗೊಳಿಸ ಲಾಗಿದೆ.

ಕಾಂಗ್ರೆಸ್ ಮತ ಯಾಚನೆ ವೀರಾಜಪೇಟೆ : ಕಾಂಗ್ರೆಸ್ ಪಕ್ಷದ ನಗರ ಘಟಕದಿಂದ ನಗರದ ವಿವಿಧ ವಾರ್ಡುಗಳಲ್ಲಿ ಮತಯಾಚನೆ ಮಾಡಲಾಯಿತು. ನಗರದ ಗೌರಿ ಕೆರೆ, ಮಂಜುನಾಥ ನಗರ, ಪಂಜರ್‍ಪೇಟೆ, ವಿಜಯನಗರ ಮತ್ತು ಡಿಸಿಲ್ವ ನಗರದಲ್ಲಿ ಅರುಣ್‍ಮಾಚಯ್ಯ ಪರ ಮತ ಯಾಚನೆ ಮಾಡಲಾಯಿತು. ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ಪಕ್ಷದ ಮುಖಂಡರುಗಳಾದ ದಿನೇಶ್, ಸಂತೋಷ್, ಮೇಘನ ಸಂತೋಷ್, ಸಂದೀಪ್, ಕಾರ್ತಿಕ್ ಅನ್‍ಸದ್, ಸುಲೈಮಾನ್, ರಫೀಕ್, ಶಾಜಿ ಮತ್ತು ಇತರರು ಹಾಜರಿದ್ದರು

ಗೋಣಿಕೊಪ್ಪದಲ್ಲಿ ಮತ ಯಾಚನೆ *ಗೋಣಿಕೊಪ್ಪಲು : ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತ ಬಿಕ್ಷೆ ಬೇಡುತ್ತಾ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ನೇತೃತ್ವದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಕಾರ್ಯ ನಡೆಯಿತು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ಜಿಲ್ಲೆಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಶಾಸಕರ ಕಾರ್ಯ ವೈಖರಿಯ ಬಗ್ಗೆ ಮತದಾರರಿಗೆ ಅರಿವಿಕೆ ಮೂಡಿಸುವ ಮೂಲಕ ಮತಯಾಚನೆಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿ.ಜೆ.ಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಸೆಲ್ವಿ, ಸದಸ್ಯೆ ರತಿ ಅಚ್ಚಪ್ಪ, ರಾಮಕೃಷ್ಣ, ಮಾಜಿ ತಾ.ಪಂ. ಅಧ್ಯಕ್ಷೆ ರಾಣಿ ನಾರಾಯಣ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಹಿಂದೂ ಜಾಗರಣ ವೇದಿಕೆಯ ನಗರ ಸಂಚಾಲಕ ಕಾದೀರ ಪೆÇನ್ನಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು. ಶಾಂತವೇರಿ ವಸಂತ್ ಜೆಡಿಎಸ್ ಸೇರ್ಪಡೆ

ಸೋಮವಾರಪೇಟೆ : ಕಳೆದ ಅನೇಕ ದಶಕಗಳಿಂದ ಭಾರತೀಯ ಜನತಾ ಪಾರ್ಟಿ ಮುಖಂಡರಾಗಿದ್ದ ಶಾಂತವೇರಿ ವಸಂತ್ ಜೆಡಿಎಸ್ ಸೇರ್ಪಡೆಗೊಂಡಿದ್ದು, ಶಾಸಕ ಅಪ್ಪಚ್ಚು ರಂಜನ್ ಅವರ ಧೋರಣೆಯಿಂದ ಪಕ್ಷ ತ್ಯಜಿಸುತ್ತಿರುವದಾಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ತÀನ್ನನ್ನು ಶಾಸಕರು ಮೂಲೆಗುಂಪು ಮಾಡಿದ್ದಾರೆ. ಇದರಿಂದ ಬೇಸತ್ತು ಜೆಡಿಎಸ್ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷದ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿ ಪಕ್ಷ ಸೇರಿರುವದಾಗಿ ಮಾಹಿತಿಯಿತ್ತರು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರನ್ನು ಸೋಲಿಸಲು ಜೀವಿಜಯ ಅವರೊಂದಿಗೆ ಶ್ರಮಿಸಿದ್ದ ವಸಂತ್ ಇದೀಗ ಬಿಜೆಪಿ ಶಾಸಕರ ದಬ್ಬಾಳಿಕೆಗೆ ಬೇಸತ್ತು ಜೆಡಿಎಸ್ ಸೇರ್ಪಡೆಗೊಂಡಿರುವದು ಸ್ವಾಗತಾರ್ಹ ಎಂದರು.ಯುವ ಕಾಂಗ್ರೆಸ್‍ಗೆ ಆಯ್ಕೆಸಿದ್ದಾಪುರ: ಅಮ್ಮತ್ತಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಇಂಜಲಗರೆಯ ರಿಯಾಜ್ ಅವರನ್ನು ಯುವ ಕಾಂಗ್ರೆಸ್ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಮ್ಮಡ ಸೋಮಣ್ಣ ಆಯ್ಕೆಗೊಳಿಸಿದ್ದಾರೆ.ಕಾಂಗ್ರೆಸ್ ಮತ ಯಾಚನೆಭಾಗಮಂಡಲ : ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಬಾಗಮಂಡಲದಲ್ಲಿ ರೋಡ್ ಶೋ ನಡೆಸಿ ಅಂಗಡಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಪಿ. ಎಂ ಖಾಸಿಂ ವಲಯ ಕಾಂಗ್ರೆಸ್ ಅಧ್ಯಕ್ಷ ಕುದುಪಜೆ ಪ್ರಾಕಾಶ್ ರವಿ ಹೇಬ್ಬರ್. ಹ್ಯಾರಿಸ್. ದೇವಂಗೋಡಿ ಹರ್ಷ. ಕೆ. ಟಿ ರಮೇಶ್ ಕೆದಂಬಾಡಿ ಸುರೇಂದ್ರ. ಸುನಿಲ್ ಪತ್ರವೋ ಅಬ್ಬಲ್ ಲತಿಪ್ ಬಾರಿಕೆ ಲೊಕೇಶ್ ಶಿವಶಂಕರ ವೈದ್ಯ ಇನ್ನಿತರರು ಇದ್ದರು.

ಚೆಟ್ಟಳ್ಳಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ

ಚೆಟ್ಟಳ್ಳಿ: ಎಂ. ಪಿ. ಅಪ್ಪಚ್ಚು ಹಾಗೂ ತಾ. ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸಮ್ಮುಖದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿ ನಡೆಯಿತು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರೆ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡುವದಾಗಿ ಭರವಸೆ ನೀಡಿ ಮತಯಾಚಿಸಿದರು. ತಾ. ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ ಬಿಜೆಪಿಗೆ ಮತ ನೀಡಿ ನಮ್ಮ ಶಾಸಕರನ್ನು ಗೆಲ್ಲಿಸಿದೇ ಆದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಒಂದು ವೇಳೆ ಶಾಸಕರು ಅಭಿವೃದ್ಧಿ ಕಾರ್ಯವನ್ನು ಮಾಡಲು ಮರೆತರೆ ಶಾಸಕರ ಮನೆ ಮುಂದೆ ಧರಣಿ ಕೂತು ಕೆಲಸ ಮಾಡಿಸುವ ಭರವಸೆ ನೀಡಿದರು. ತಾ.ಪಂ.ಉಪಾಧ್ಯಕ್ಷ ಅಭಿಮನ್ಯೂ ಕುಮಾರ್,ಪಕ್ಷದ ಚುನಾವನಾ ಉಸ್ತುವಾರಿ ಪಟ್ಟೆಮನೆ ಶೇಷಪ್ಪ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್,ತಾಲೂಕು ಬಿಜೆಪಿ ಅಧ್ಯಕ್ಷ ಕುಮಾರಪ್ಪ, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಚೆಟ್ಟಳ್ಳಿ ಪಂ.ಸದಸ್ಯ ಬಲ್ಲಾರಂಡ ಕಂಠಿಕಾರ್ಯಪ್ಪ, ಪಂ. ಸದಸ್ಯರಾದ ದೇವಯಾನಿ, ರವಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಬಿಜೆಪಿಗೆ ಸೇರ್ಪಡೆ : ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯ ಸಂದರ್ಭ ಸ್ತ್ರೀ ಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಹಾಗೂ ಚೆಟ್ಟಳ್ಳಿ ಪಂಚಾಯಿತಿ ಸದಸ್ಯೆ ಮೇರಿ ಅಂಬುದಾಸ್ ಹಾಗೂ ಮತ್ತೋರ್ವ ಪಂಚಾಯಿತಿ ಸದಸ್ಯೆ ಮಾಲಾಶ್ರೀ ಬಿಜೆಪಿಗೆ ಸೇರ್ಪಡೆ ಗೊಂಡರು. ಅಲ್ಪ ಸಂಖ್ಯಾತ ಬಿಜೆಪಿ ಮೋರ್ಚ ಅಧ್ಯಕ್ಷರಾಗಿ ಫಿಲೀಪ್, ಕಾರ್ಯದಶಿಯಾಗಿ ಮೋನ್ಸಿ ಚೆಟ್ಟಳ್ಳಿ ಹಾಗೂ ಖಜಾಂಜಿಯಾಗಿ ಉಮ್ಮರ್‍ಕಾಫಿ ಬೋರ್ಡ್ ಅವರನ್ನು ಆಯ್ಕೆ ಮಾಡಲಾಯಿತುವೀರಾಜಪೇಟೆಯಲ್ಲಿ ಕಾಂಗ್ರೆಸ್ ಮತ ಯಾಚನೆಗೋಣಿಕೊಪ್ಪ : ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ಮತ ಪ್ರಚಾರ ನಡೆಸಿದರು. ಉಮಾಮಹೇಶ್ವರಿ ದೇವಾಲಯ ಆವರಣದಿಂದ ಪಾಲಿಬೆಟ್ಟ ರಸ್ತೆ ಜಂಕ್ಷನ್ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರಚಾರ ನಡೆಸಿದರು. ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಪ್ರಮುಖರುಗಳಾದ ಬಿ. ಎನ್. ಪ್ರಕಾಶ್, ಜಮ್ಮಡ ಸೋಮಣ್ಣ, ಅಜಿತ್ ಅಯ್ಯಪ್ಪ ಇತರರು ಪಾಲ್ಗೊಂಡಿದ್ದರು.ಎತ್ತಿನ ಗಾಡಿ ಏರಿ ಸಾಗಿ ಜೀವಿಜಯ ಮತಯಾಚನೆ

ಕೂಡಿಗೆ : ತೊರೆನೂರು ಗ್ರಾಮದಲ್ಲಿ ಜೆಡಿಎಸ್‍ನ ತೆನೆ ಹೊತ್ತ ಮಹಿಳೆ ಪಕ್ಷದ ಚಿಹ್ನೆಯಂತೆ ಎತ್ತಿನಗಾಡಿಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತ ಬಾಲಕಿಯನ್ನು ನಿಲ್ಲಿಸಿ, ವಿಧಾನಸಭಾ ಮಡಿಕೇರಿ ಕ್ಷೇತ್ರದ ಜಾತ್ಯಾತೀತ ಜನತಾ ದಳ ಅಭ್ಯರ್ಥಿ ಜೀವಿಜಯ ಅವರು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮತಯಾಚನೆ ಮಾಡಿದರು. ಶಿರಂಗಾಲ, ಅಳುವಾರ, ಹೆಬ್ಬಾಲೆಯಲ್ಲಿ ಮತ ಪ್ರಚಾರ ಸಭೆಗಳು ನಡೆದವು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ.ಎಲ್.ವಿಶ್ವ, ಶಿರಂಗಾಲ ಗ್ರಾ.ಪಂ ಅಧ್ಯಕ್ಷ ರಮೇಶ್, ಪಕ್ಷದ ಮುಖಂಡರಾದ ಕೆ.ಎಸ್.ಕೃಷ್ಣೇಗೌಡ, ಚಂದ್ರಶೇಖರ್, ಕೋಟಿರಾಮಣ್ಣ, ಚಿಕ್ಕತ್ತೂರು ರಾಮೇಗೌಡ, ಕೆ.ಕೆ.ಹೇಮಂತ್‍ಕುಮಾರ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.ರಂಜನ್ ಪುತ್ರನಿಂದ ಮತ ಯಾಚನೆಶನಿವಾರಸಂತೆ : ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚ ರಂಜನ್ ಪರವಾಗಿ ಅವರ ಪುತ್ರ ಡಾ. ಎಂ. ಎ. ಕಾರ್ಯಪ್ಪ ಗ್ರಾ. ಪಂ. ವ್ಯಾಪ್ತಿಯಲ್ಲಿ ಮತ ಯಾಚಿಸಿದರು. ಅಮೇರಿಕಾದಲ್ಲಿ ತಜ್ಞ ವೈದ್ಯರಾಗಿರುವ ಡಾ. ಎಂ. ಎ. ಕಾರ್ಯಪ್ಪ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಂದೆಯ ಪರವಾಗಿ ಚುನಾವಣಾ ಪ್ರಚಾರ ಪ್ರಯುಕ್ತ ಮನೆ-ಮನೆಗಳಿಗೆ ತೆರಳಿ ಮತ ಯಾಚಿಸಿದರು. ಶನಿವಾರಸಂತೆ ಹೋಬಳಿ ಅಧ್ಯಕ್ಷ ಯತೀಶ್, ಮುಖಂಡರಾದ ತೇಜಸ್, ಭುವನೇಶ್ವರಿ, ಉಷಾ ತೇಜಸ್ವಿ, ಗ್ರಾ. ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯರು ಇದ್ದರು.ಭಾಗಮಂಡಲದಲ್ಲಿ ಬಿಜೆಪಿ ಪ್ರಚಾರಭಾಗಮಂಡಲ : ಇಲ್ಲಿನ ವಾಹನ ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಕೆ. ಜಿ. ಬೋಪಯ್ಯ ತಾನು ಮೂರು ಬಾರಿ ಶಾಸಕನಾಗಿ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದ್ದು ಈ ಆಧಾರದಲ್ಲಿ ಮತಯಾಚನೆ ನಡೆಸುತ್ತಿದ್ದು ಜನರು ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ , ಡಾ. ಕುಶ್ವಂತ್, ತಳೂರು ಕಿಶೋರ್, ಕವಿತಾಪ್ರಭಾಕರ್, ಕುಮಾರ್, ಬಿಜೆಪಿ ಉಸ್ತುವಾರಿ ನಾಗೇಶ ಕುಂದಲ್ಪಾಡಿ, ಸೂರ್ತಲೆ ಕಾಶಿ, ಗ್ರಾಂ.ಪಂ. ಅದ್ಯಕ್ಷೆ ಸುಮಿತ್ರಾ, ಸದಸ್ಯರಾದ ಭವಾನಿ ಹರೀಶ, ಭಾಸ್ಕರ್, ರಾಜರೈ, ರಾಜೀವ್, ಪದ್ಮಯ್ಯ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ಪ್ರಚಾರ ವಾಹನವನ್ನು ಪೊಲೀಸರು ತಡೆದು ಸಭೆ ಮುಗಿದ ಬಳಿಕ ಮುಂದೆ ಸಾಗಲು ಅನವು ಮಾಡಿಕೊಟ್ಟರು.ಮಾದಾಪುರದಲ್ಲಿ ಬಿಜೆಪಿ ಪ್ರಚಾರಸುಂಟಿಕೊಪ್ಪ : ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಆಡಳಿತಾವಧಿಯಲ್ಲಿ ಕೊಡಗಿಗೆ 200ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಿ ಕೇವಲ 41ಕೋಟಿ ಬಿಡುಗಡೆ ಮಾಡಿ ಕೊಡಗಿನ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಆರೋಪಿಸಿದರು. ಮಾದಾಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 150 ಸ್ಥಾನದೊಂದಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದೂ ಭವಿಷ್ಯ ನುಡಿದರು. ಕೇರಳ ಬಿಜೆಪಿ ಸಂಚಾಲಕ ರಂಜಿತ್ ಮಾತನಾಡಿ ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಿಸಿ ಕೋಮುಸೌಹರ್ದತೆ ಹಾಳು ಮಾಡಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ದೂರಿದರು. ಮಾಜಿ ಜಿ. ಪಂ. ಅಧ್ಯಕ್ಷ ವಿ. ಎಂ. ವಿಜಯ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸ್ವಾಗತಿಸಿದರು. ಆನಂತರ ಶಾಸಕರು ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ಅಂಗಡಿಗಳಿಗೆ ತೆರಳಿ ಮತಯಾಚಿಸಿದರು. ಜಿ.ಪಂ.ಮಾಜಿ ಸದಸ್ಯ ಟಿ.ಪಿ.ಸುದೇಶ, ಮಾದಾಪುರ ಗ್ರಾ.ಪಂ.ಸದಸ್ಯ ನಾಪಂಡ ಉಮೇಶ ಉತ್ತಪ್ಪ, ಮಾಜಿ ಗ್ರಾ. ಪಂ. ಸದಸ್ಯ ಭಾಸ್ಕರ ಸಾಯಿ ಇದ್ದರು.ಶ್ರೀಮಂಗಲ ವ್ಯಾಪ್ತಿಯಲ್ಲಿ ಜೆಡಿಎಸ್ ಮತ ಪ್ರಚಾರ

ಗೋಣಿಕೊಪ್ಪಲು : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ದ. ಕೊಡಗಿನ ಶ್ರೀಮಂಗಲದ ಚೀಪೆಕೊಲ್ಲಿಯ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿದರು. ಬೆಳೆಗಾರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ ರೈತರ ಕಾಫಿ ಬೆ