ಮಡಿಕೇರಿ, ಮೇ 7 : ಸಿದ್ದಾಪÀÅರ ಮುಸ್ಲಿಂ ಜಮಾಅತ್‍ನ ಅಧೀನದಲ್ಲಿ ಧಾರ್ಮಿಕ ಶಿಕ್ಷಣದ ಶರೀಯತ್ ಕಾಲೇಜು ಬರುವ ಶೈಕ್ಷಣಿಕ ಸಾಲಿನಿಂದ ಆರಂಭಗೊಳ್ಳಲಿದೆ ಎಂದು ಸಿದ್ದಾಪÀÅರ ವಲಯದ ಜಂಇಯ್ಯತ್ತುಲ್ ಮುಅಲ್ಲಿಮೀನ್ ಸಂಘÀಟನೆ ಪ್ರಧಾನ ಕಾರ್ಯದರ್ಶಿ ಎಂ. ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 5 ವರ್ಷದ ಧಾರ್ಮಿಕ ವಿದ್ಯಾಭ್ಯಾಸದ ನಂತರ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಂಗೀಕೃತ ಅರೆಬಿಕ್ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವಕಾಶ ಮಾಡಿಕೊಡಲಾಗುವದು ಎಂದರು.

ದ್ವಿತೀಯ ಪಿಯುಸಿ ಮತ್ತು ಪದವಿ ವ್ಯಾಸಂಗಕ್ಕೆ ಧಾರ್ಮಿಕ ಶಿಕ್ಷಣದ ಜೊತೆಯಲ್ಲೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವದು. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ಕೇಂದ್ರಗಳನ್ನು ತೆರೆಯಲಾಗುವದು. ಇದರೊಂದಿಗೆ ಕಂಪ್ಯೂಟರ್ ವಿಭಾಗ, ಇಂಗ್ಲೀಷ್ ವ್ಯಕ್ತಿತ್ವ ಶಿಬಿರ ಹಾಗೂ ಧಾರ್ಮಿಕ ಲೌಕಿಕ ಶಿಕ್ಷಣವನ್ನು ನೀಡಲಾಗುವದು. 7ನೇ ತರಗತಿ ನಂತರ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಪ್ರಗತಿಗಾಗಿ ಅವಕಾಶಗಳನ್ನು ಕಲ್ಪಿಸಲಾಗುವದು. ಊಟ ವಸತಿ ಉಚಿತವಾಗಿದ್ದು, ಇದೇ ತಾ. 30ರ ಒಳಗೆ ಆಸಕ್ತರು ಸಿದ್ದಾಪುರ ಮುಸ್ಲಿಂ ಜಮಾಅತ್ ಸಮಿತಿಯನ್ನು ಸಂಪರ್ಕಿಸಬಹುದಾಗಿದೆಯೆಂದು ತಿಳಿಸಿದರು.

ಜಿಲ್ಲೆಯಲ್ಲಿ 1975ರಲ್ಲಿ ಪ್ರಥಮವಾಗಿ ಪ್ರಾರಂಭಿಸಿದ ಸಿದ್ದಾಪುರ ಮುಸ್ಲಿಂ ಅನಾಥಾಲಯ ಜಿಲ್ಲೆಯ ಮುಸ್ಲಿಂ ಅನಾಥ ವಿದ್ಯಾರ್ಥಿಗಳ ಆಶಾ ಕೇಂದ್ರವಾಗಿದೆ. ಇದೀಗ 1ನೇ ತರಗತಿಯಿಂದ 8ನೇ ತರಗತಿಯವರೆÀಗೆ ಅನಾಥ ಮಕ್ಕಳಿಗೆ ಪ್ರವೇಶಾತಿಯನ್ನು ಕಲ್ಪಿಸಲಾಗಿದೆ. ಧಾರ್ಮಿಕ ವಿದ್ಯಾಭ್ಯಾಸ ದೊಂದಿಗೆ ಲೌಕಿಕ ವಿದ್ಯಾಭ್ಯಾಸ ನೀಡ ಲಾಗುತ್ತಿದ್ದು, ಪ್ರಸ್ತುತ ಅನಾಥಾಲಯ ಮತ್ತು ಶರೀಯತ್ ಕಾಲೇಜಿಗೆ ಪ್ರವೇಶಾತಿ ಪಡೆಯ ಬಯಸುವವರು ದೂರವಾಣಿ 08274-258532 ಮತ್ತು ಮೊ. 9845248492 ವನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ. ಉಸ್ಮಾನ್ ಹಾಜಿ, ಖತೀಬ ಪಿ.ನೌಫಲ್ ಹುದವಿ, ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಶಾಲೆಯ ಪ್ರಾಂಶುಪಾಲ ಪಿ.ಎಂ. ಆರಿಫ್ ಫೈಝಿ, ಜಮಾಅತ್ ಸದಸ್ಯರಾದ ಕೆ.ಟಿ. ಮುಹಮ್ಮದ್ ಹಾಜಿ ಮತ್ತು ಸಮೀರ್ ಉಪಸ್ಥಿತರಿದ್ದರು.