ಮಡಿಕೇರಿ, ಮೇ 7: ಇಲ್ಲಿನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಸಂಜೆ 6 ಗಂಟೆಯಿಂದ ಸ್ಥಳ ಶುದ್ಧಿಯೊಂದಿಗೆ ಆಚಾರ್ಯವರಣಂ, ಪುಣ್ಯಾಹ, ಸುದರ್ಶನ ಹೋಮ, ದೇವಿ ಪೂಜೆ, ಲಲಿತ ಸಹಸ್ರ ನಾಮಾರ್ಚನೆಯೊಂದಿಗೆ ಆರಂಭಗೊಂಡಿತು.

ಇಂದು ಬೆಳಿಗ್ಗೆ ಸನ್ನಿಧಿಯಲ್ಲಿ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಲಶ ಪೂಜೆ, ಕಲಶಾಭಿಷೇಕ, ಸರ್ವಾಲಂಕಾರ ಪೂಜೆಯೊಂದಿಗೆ ದೈವಿಕ ಕೈಂಕರ್ಯ ನೆರವೇರಿತು. ಅಲ್ಲದೆ ನಾಗ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಉಡುಪಿ ಪೆರ್ಲಂಪಾಡಿಯ ರಮಾನಂದ ಭಟ್ ನೇತೃತ್ವದಲ್ಲಿ ನಾಗದರ್ಶನದೊಂದಿಗೆ ನಡೆಯಿತು. ಅಲ್ಲದೆ ಪಾಷಾಣಮೂರ್ತಿ ದೈವಕೋಲ ಸಂಜೆ ನಡೆಯುವದರೊಂದಿಗೆ ಸದ್ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳು, ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.