ಮಡಿಕೇರಿ, ಮೇ 7: 19ನೇ ಕರ್ನಾಟಕ ಎನ್‍ಸಿಸಿ ಬೆಟಾಲಿಯನ್ ವತಿಯಿಂದ ‘ಬೆಸ್ಟ್ ಕೆಡೆಟ್’ ಸನ್ಮಾನಕ್ಕೆ ಮೂವರು ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎಸ್‍ಜಿಟಿ ಕೆ.ಟಿ. ಚೋಂದಮ್ಮ, ಎಸ್‍ಜಿಟಿ ಕಾರ್ತಿಕ್ ಕುಟ್ಟಪ್ಪ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜಿನ ಜೆಯುಓ ಎನ್.ಎಂ. ಮೊವಿನ್ ಕುಮಾರ್ ಇವರುಗಳು ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ. ನಾಯಕ್ ಅವರಿಂದ ಬೆಸ್ಟ್ ಕೆಡೆಟ್ಸ್ ಸನ್ಮಾನ ಸ್ವೀಕರಿಸಿದರು.