ನಾಪೆÇೀಕ್ಲು, ಮೇ 8: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತಮೂರನೇ ದಿನದ ಪಂದ್ಯಾಟದಲ್ಲಿ ಅನ್ನಾಡಿಯಂಡ, ಮಂಡೇಪಂಡ, ಕೂತಂಡ, ಬಾಳೆಯಡ, ಚೆರುಮಂದಂಡ, ಕಾಂಡಂಡ, ಮುಕ್ಕಾಟಿರ (ಬೋಂದ), ಮಚ್ಚಂಡ, ಪೆಮ್ಮಂಡ, ಮೇಕೇರಿರ, ಕುಲ್ಲೇಟಿರ, ಕರ್ತಮಾಡ ತಂಡಗಳು ಮುನ್ನಡೆ ಸಾಧಿಸಿವೆ.
ತಿರುಟೆರ ಮತ್ತು ಅನ್ನಾಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅನ್ನಾಡಿಯಂಡ ತಂಡವು ತಿರುಟೆರ ತಂಡವನ್ನು 3-1 ಗೋಲಿನ ಅಂತರದಿಂದ ಸೋಲಿಸಿತು. ಅನ್ನಾಡಿಯಂಡ ತಂಡದ ಪರ ನಿಖಿಲ್, ಸಜನ್, ನವೀನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ತಿರುಟೆರ ತಂಡದ ಪರ ಗೌತಮ್ ಒಂದು ಗೋಲು ದಾಖಲಿಸಿದರು. ಬಾಚಿರ ಮತ್ತು ಮಂಡೇಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಪಂಡ ತಂಡವು ಬಾಚಿರ ತಂಡವನ್ನು 4-0 ಗೋಲಿನಿಂದ ಮಣಿಸಿತು. ಮಂಡೇಪಂಡ ತಂಡದ ಪರ ಗೌತಮ್ ಎರಡು, ಬೋಪಣ್ಣ, ದಿಲನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಕೂತಂಡ ಮತ್ತು ಕಂಗಾಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಕೂತಂಡ ತಂಡವು ಕಂಗಾಂಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕೂತಂಡ ತಂಡದ ಪರ ಸಂತೋಷ್ ಎರಡು, ಬೋಪಣ್ಣ ಒಂದು ಗೋಲು ದಾಖಲಿಸಿದರೆ, ಕಂಗಾಂಡ ತಂಡದ ಪರ ಮುತ್ತಪ್ಪ ಒಂದು ಗೋಲು ದಾಖಲಿಸಿದರು. ಪುಲಿಯಂಡ ಮತ್ತು ಬಾಳೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಳೆಯಡ ತಂಡವು ಪುಲಿಯಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಬಾಳೆಯಡ ತಂಡದ ಪರ ಪವನ್ ಸೋಮಯ್ಯ, ಸುತನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.
ಚೆರುಮಂದಂಡ ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುಮಂದಂಡ ತಂಡವು ಮಾಚಂಗಡ ತಂಡವನ್ನು 3-2 ಗೋಲಿನಿಂದ ಪರಾಭವಗೊಳಿಸಿತು. ಚೆರುಮಂದಂಡ ತಂಡದ ಪರ ಸೋಮಣ್ಣ ಎರಡು, ಕವನ್ ಕಾರ್ಯಪ್ಪ ಒಂದು ಗೋಲು ದಾಖಲಿಸಿದರೆ, ಮಾಚಂಗಡ ತಂಡದ ಪರ ದರ್ಶನ್ ಪೂವಯ್ಯ, ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕಾಂಡಂಡ ಮತ್ತು ಚಂದಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಡಂಡ ತಂಡವು ಚಂದಪಂಡ ತಂಡವನ್ನು 3-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಕಾಂಡಂಡ ತಂಡದ ಪರ ಕಿರಣ್ ಮಂದಯ್ಯ ಎರಡು, ಅಜಯ್ ಅಯ್ಯಪ್ಪ ಒಂದು ಗೋಲು ದಾಖಲಿಸಿದರೆ, ಚಂದಪಂಡ ತಂಡದ ಪರ ಆಕಾಶ್ ಚಂಗಪ್ಪ ಒಂದು ಗೋಲು ದಾಖಲಿಸಿದರು.
ಮುಂಡೋಟಿರ ಮತ್ತು ಮುಕ್ಕಾಟಿರ (ಬೋಂದ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಮುಂಡೋಟಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಮುಕ್ಕಾಟಿರ ತಂಡದ ಪರ ವಸಂತ್ ಬೋಪಣ್ಣ, ಚರಣ್ ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಐಚಂಡ ಮತ್ತು ಮಚ್ಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಚ್ಚಂಡ ತಂಡವು ಐಚಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ತಂಡದ ಪರ ಪ್ರಿನ್ಸ್ ಎರಡು, ನೂತನ್ ಒಂದು ಗೋಲು ದಾಖಲಿಸಿದರು.
ಮಾಚಿಮಾಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಪೆಮ್ಮಂಡ ತಂಡವು ಮಾಚಿಮಾಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಪೆಮ್ಮಂಡ ತಂಡದ ಪರ ಅಪ್ಪಣ್ಣ, ಸೋಮಣ್ಣ, ಬೋಪಣ್ಣ ತಲಾ ಒಂದೊಂದು ಗೋಲು ದಾಖಲಿಸಿದರೆ, ಮಾಚಿಮಾಡ ತಂಡದ ಪರ ದರ್ಶನ್ ಒಂದು ಗೋಲು ದಾಖಲಿಸಿದರು. ಇಟ್ಟಿರ ಮತ್ತು ಮೇಕೇರಿರ ತಂಡಗಳ ನಡುವಿನ ಸೆಣೆಸಾಟದಲ್ಲಿ ಮೇಕೇರಿರ ತಂಡವು ಇಟ್ಟಿರ ತಂಡವನ್ನು ಟೈ ಬ್ರೇಕರ್ನ 4-3 ಗೋಲಿನಿಂದ ಮಣಿಸಿತು.
ಕುಲ್ಲೇಟಿರ ಮತ್ತು ಮದ್ರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮದ್ರಿರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಕುಲ್ಲೇಟಿರ ತಂಡದ ಪರ ನಂದಾ ನಾಚಪ್ಪ, ಶುಭಂ, ಯತಿನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕೋದಂಡ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡವು ಕೋದಂಡ ತಂಡವನ್ನು 3-0 ಗೋಲಿನ ಅಂತರದಿಂದ ಸೋಲಿಸಿತು. ಕರ್ತಮಾಡ ತಂಡದ ಪರ ಅಯ್ಯಪ್ಪ ಎರಡು, ರಿಕಿನ್ ಗಣಪತಿ ಒಂದು ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು.