ಮಡಿಕೇರಿ, ಮೇ 8: ನಗರದ ಶ್ರೀ ಕೋಟೆಮಾರಿಯಮ್ಮ ಸನ್ನಿಧಿಯಲ್ಲಿ ನಿನ್ನೆ ವಾರ್ಷಿಕ ಪ್ರತಿಷ್ಠಾಪನೋತ್ಸವ, ನಾಗದರ್ಶನ ಸಹಿತ ದೇವತಾ ಕಾರ್ಯಗಳು ನಡೆಯಿತು. ರಾತ್ರಿ ಪಾಷಾಣ ಮೂರ್ತಿ ದೈವಕೋಲದೊಂದಿಗೆ ಇಂದು ಎಡೆ ಸೇವೆ ಇತ್ಯಾದಿ ದೈವಿಕ ಕೈಂಕರ್ಯ ಜರುಗಿತು. ವಿಶೇಷ ಪೂಜಾಧಿಗಳಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾದರು.